ಅನಾರೋಗ್ಯದಿಂದ ಬಳಲುತ್ತಿರುವ ಯುವಕ : ಕಾರ್ತಿಕ್ ಕುಟುಂಬಕ್ಕೆ ಬೇಕಾಗಿದೆ ಆರ್ಥಿಕ ಸಹಾಯ

ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಹಳ್ನಾಡು ಎಂಬಲ್ಲಿ ವಾಸವಾಗಿರುವ ಕಾರ್ತಿಕ್ (20) ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರೆ ಇತ್ತ ತಂದೆ ಮಾನಸಿಕ ಅಸ್ವಸ್ಥರು.

ಮನೆಯ ಸಂಪೂರ್ಣ ಜವಾಬ್ದಾರಿಯನ್ನು ತನ್ನ ತಲೆಯ ಮೇಲೆ ಹಾಕಿಕೊಂಡು, ತನ್ನ ವಿದ್ಯಾಭ್ಯಾಸವನ್ನೆ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನ ಹೋಟೆಲ್ ನಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಾರ್ತಿಕ್. ತನ್ನ ಎಳೆಯ ವಯಸ್ಸಿನಲ್ಲಿಯೇ ಸೋರುತ್ತಿದ್ದ ಮನೆಯನ್ನು ಮಾವನ ಸಹಾಯದಿಂದ ಹಾಗೂ ಬ್ಯಾಂಕಿನಿಂದ ಸಾಲ ಪಡೆದು ಹೊಸತಾಗಿ ಮನೆ ನಿರ್ಮಾಣ ಮಾಡಿ ಅದರ ಸಾಲವನ್ನು ತೀರಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಬರ ಸೀಡಿಲಿನಂತೆ ಬ್ಲಡ್ ಕ್ಯಾನ್ಸರ್ ಎಂಬ ಮಹಾಮಾರಿ ಬಂದೆರಗಿದೆ. ಸರಿ ಸುಮಾರು 6 ಲಕ್ಷ ವೆಚ್ಚ ತಗಲಬಹುದೆಂದು ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಇಂತಹ ಕಷ್ಟದಲ್ಲಿ ಇರುವ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ, ಪ್ರಾಮಾಣಿಕತೆ ಹಾಗೂ ಮಾನವೀಯತೆ ಇನ್ನೂ ಇದೆ ಎಂದು ನಾವೆಲ್ಲ ಈ ಮುಖಾಂತರ ಸಾಬೀತುಪಡಿಸೋಣ. ನಾವುಗಳು ಧನಸಹಾಯ ಮಾಡಿ ಈ ಬಡ ಕುಟುಂಬಕ್ಕೆ ಆಸರೆ ಆಗೋಣ.

ಈ ಬಡ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವವರು ದೂರವಾಣಿ ಸಂಖ್ಯೆಗೆ ಹಾಗೂ ಧನಸಹಾಯ ಮಾಡುವವರಿಗೆ ಕೆಳಕಂಡ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:8197333217
ಬ್ಯಾಂಕ್ ಖಾತೆ ನಂಬರ್:81890100002255

IFSC :BARB0VJKAUD

Google/phone pay :9591736918 ಗೆ ಸಹಾಯವನ್ನು ಮಾಡಬಹುದು.

Related Posts

Leave a Reply

Your email address will not be published.