ಅಮೆರಿಕಾ ನಿವಾಸಿ ಭಾರತೀಯರಿಂದ ಸ್ವಾಂತಂತ್ರ್ಯ ದಿನಾಚರಣೆ
ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರು ನ್ಯೂಯಾರ್ಕ್ ನಗರದ ಹಿಕ್ಸ್ವ್ಯಾಲಿಯಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದರು. ಇಂಡಿಯಾ ಡೇ ಪೆರೇಡ್ ಎಂಬ ವರ್ಣರಂಜಿತ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಯೋಜಿಸಿದರು.
ಕಾರ್ಯಕ್ರಮಕ್ಕೆ ಮೊದಲು ವರ್ಣರಂಜಿತ ಮೆರವಣಿಗೆ ನಡೆಯಿತು. ಮೆರವಣಿಗೆ ಬಳಿಕ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಕಾನ್ಸಲೇಟ್ ಜನರಲ್ ರಣಧೀರ್ ಜೈಸ್ವಾಲ್ , ಪ್ರಸಿದ್ದ ಸಿನಿಮಾ ನಟಿ ಐಲಿನಾ ಡಿ,ಕ್ರೂಸ್ , ಉದ್ಯಮಿ ಡಾ. ಜೆ ಸರ್ಕಾರ್ ಭಾಗವಹಿಸಿದ್ದರು, ಅತಿಥಿಗಳಾಗಿ ಕರ್ನಾಟಕ ಮೂಲದ ಅಮೆರಿಕಾ ನಿವಾಸಿ ಮಿಸೆಸ್ಸ್ ಇಂಡಿಯಾ ಯು.ಎಸ್.ಎ ವಿಜೇತೆ ಮೊಡೇಲ್ ಶೃತಿ ಬೇಕಲ್ , ಪ್ರಸಿದ್ದ ವೈದ್ಯ ಪದಶ್ರೀ ಪುರಸ್ಕøತ ಡಾ.ದತ್ತಾತ್ತೇಯಡು ನೂರಿ , ಅಮೆರಿಕಾ ಕನ್ನಡ ಸಂಘಟನೆ ನಾವಿಕ ಸಂಘಟನೆಯ ಅಧ್ಯಕ್ಷ ನವೀನ್ ಷಾ , ದೀಪಕ್ ಬನ್ಸಾಲ್ , ಅಮೆರಿಕಾ ದೀಪಾವಳಿ ಫೌಂಡೇಶನ್ ಅಧ್ಯಕ್ಷೆ ರಂಜು ಬಾತ್ರಾ , ಜೀವನ ಕೌಶಲ್ಯ ತರಬೇತುದಾರ ಇಶಾನ್ ಶಿವಾನಂದನ್ ಭಾಗವಹಿಸಿದ್ದರು. ಇಂಡಿಯಾ ಡೇ ಪೆರೇಡ್ ಅಮೆರಿಕಾ ಸಂಸ್ಥೆಯು ಆಯೋಜಿಸಿದ ಹತ್ತನೇ ವರ್ಷದ ಕಾರ್ಯಕ್ರಮ ಇದಾಗಿದೆ.
ಇಂಡಿಯಾ ಡೇ ಪೆರೇಡ್ ಕಾರ್ಯಕ್ರಮದ ಸಂಸ್ಥಾಪಕರಾದ ಡಾ. ಬಾಬ್ಬಿ ಕಲೋಟೆ , ಕಮಲೇಶ್ ಮೆಹ್ತಾ ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಾರತೀಯರು ಭಾಗಹಿಸಿದ್ದರು.