ಅರ್ಕುಳ ಶ್ರೀ ವರದೇಶ್ವರ ದೇವಸ್ಥಾನದ ಡ್ರೈನೇಜ್ ಸಮಸ್ಯೆ: ಶಾಸಕ ಡಾ ವೈ ಭರತ್ ಶೆಟ್ಟಿ ಭೇಟಿ
ಇತಿಹಾಸ ಪ್ರಸಿದ್ಧ ಸುಮಾರು 800 ವರ್ಷಗಳಷ್ಟು ಪ್ರಾಚೀನ ಸ್ವಯಂಭೂ ಅರ್ಕುಳ ಶ್ರೀವರದೇಶ್ವರ ದೇವಸ್ಥಾನ ಬಳಿ ರೈಲ್ವೆ ಇಲಾಖೆಯವರು ಗೋಡೆಕಟ್ಟುವ ಕಾಮಗಾರಿ ಸಂದರ್ಭದಲ್ಲಿ ದೇವಸ್ಥಾನದ ಡ್ರೈನೇಜ್ ವ್ಯವಸ್ಥೆಗೆ ಲೋಪವಾಗಿತ್ತು.
ಇದರ ಪರಿಣಾಮ ದೇವಸ್ಥಾನದ ಅಂಗಣ ತುಂಬಾ ಮಳೆನೀರು ತುಂಬಿಕೊಂಡಿತ್ತು. ಈ ವಿಷಯವನ್ನು ಅರ್ಕುಳ ಗ್ರಾಮಸ್ಥರು ಶಾಸಕರಾದ ಡಾ ವೈ ಭರತ್ ಶೆಟ್ಟಿಯವರಲ್ಲಿ ತಿಳಿಸಿದಾಗ ಕೂಡಲೇ ಸ್ಪಂದಿಸಿ ರೈಲ್ವೆ ಇಲಾಖೆಯವರೊಂದಿಗೆ ಮಾತನಾಡಿ ತ್ವರಿತ ವಾಗಿ ಸರಿಪಡಿಸುವಂತೆ ಸೂಚನೆ ನೀಡಿದರು. ಶಾಸಕರು ಸ್ವತಃ ದೇವಸ್ಥಾನಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಮುಂದಿನ ಕಾಮಗಾರಿಯಬಗ್ಗೆ ಮಾಹಿತಿ ಕೇಳಿ ತಮ್ಮ ಸಲಹೆಯನ್ನು ನೀಡಿದರು.