ಅಸ್ಸಾಂ ಗೋಲಿಬಾರ್ ದೌರ್ಜನ್ಯ, ಗ್ರಾಮಸ್ಥರ ಹತ್ಯೆ ಖಂಡನೆ : ಡಿವೈಎಫ್‍ಐ ಸಮಿತಿಯಿಂದ ಪ್ರತಿಭಟನೆ

ದೇರಳಕಟ್ಟೆ: ಅಸ್ಸಾಂ ಗೋಲಿಬಾರ್ ದೌರ್ಜನ್ಯ ಗ್ರಾಮಸ್ಥರ ಹತ್ಯೆ ಖಂಡಿಸಿ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ದೇರಳಕಟ್ಟೆಯಲ್ಲಿ ಪ್ರತಿಭಟನೆ ನಡೆಯಿತು.

ಡಿವೈ ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಪ್ರತಿಭಟನೆ ಉದೇಶಿಸಿ ಮಾತನಾಡಿ ಅಸ್ಸಾಂ ದರಾಂಗ್ ಜಿಲ್ಲೆಯಲ್ಲಿ ಅಮಾನುಷವಾಗಿ ಪೆÇಲೀಸರು ನಾಗರಿಕನನ್ನು ಹತ್ಯೆ ನಡೆಸಿರುವುದು ಮಾನವ ಕುಲ ತಲೆತಗ್ಗಿಸಬೇಕಾದ ವಿಚಾರ. ಜನರ ಮನವೊಲಿಸದೆ ಭೂಮಿಯನ್ನು ಬಿಟ್ಟುಕೊಡಲು ಒತ್ತಡ ಹಾಕಿ ಕಸಿಯುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.

ವಕೀಲ ನಿತಿನ್ ಕುತ್ತಾರ್ ಮಾತನಾಡಿ, ಸರಕಾರದ ಪತ್ರಕರ್ತ ಬಿಜೆಪಿಯ ಏಜೆಂಟ್, ಸಂಘ ಪರಿವಾರದ ಕಾರ್ಯಕರ್ತನಾಗಿದ್ದಾನೆ. ವ್ಯಕ್ತಿಯನ್ನು ತುಳಿಯುವುದು ಸಂಘ ಪರಿವಾರದ ಜಾಯಮಾನ. ಬಿಜೆಪಿ ಪ್ರೇರಿತ ಮಾಧ್ಯಮಗಳು ಇಂತಹ ಕೃತ್ಯದಲ್ಲಿ ಸಕ್ರಿಯವಾಗಿದೆ. ಖಾಸಗಿ ಕಂಪೆನಿಗೆ ಜಾಗ ಕೊಡುವ ಉದ್ದೇಶದಿಂದ ಕೃತ್ಯ ನಡೆದಿದೆ. ಮಲ್ಟಿ ನ್ಯಾಷನಲ್ ಕಂಪೆನಿಗಳಿಗೆ ಜಾಗ ಸರಕಾರ ಹೊಂದಿದೆ ಎಂದರು.

ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ, ಜಿಲ್ಲಾ ಮುಖಂಡರುಗಳಾದ ಜೀವನ್ ರಾಜ್ ಕುತ್ತಾರ್, ನಿತಿನ್ ಕುತ್ತಾರ್, ರಝಾಕ್ ಮೊಂಟೆಪದವು, ಅಶ್ರಫ್ ಹರೇಕಳ, ರಝಾಕ್ ಮುಡಿಪು, ಕಾರ್ಮಿಕ ಮುಖಂಡ ಇಬ್ರಾಹಿಂ ಮದಕ, ಸುನಿಲ್ ತೇವುಲ,ರಾಣಿ ಅಬ್ಬಕ್ಕ ಬಸ್ ಚಾಲಕರ ಸಂಘದ ಕಾರ್ಯದರ್ಶಿ ಜಗದೀಶ್, ತಿಲಕ್ ರಾಜ್ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.