ಆಲೂರಿನ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾದ ಮದ್ಯ ಮಾರಾಟ: ಗ್ರಾಮಸ್ಥರ ಆಕ್ರೋಶ

ಆಲೂರು : ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಮಾರಾಟವಾಗುತ್ತಿರುವುದರಿಂದ ಮದ್ಯ ಸೇವನೆಯಿಂದ ತಾಲೂಕಿನಲ್ಲಿ ಒಂದೇ ತಿಂಗಳಿಗೆ 3 ಜನ ಅಮಾಯಕರು ಮೃತಪಟ್ಟಿರುವ ಘಟನೆ ತಾಲೂಕಿನ ಕೆ.ಹೊಸಕೋಟೆ ಹೊಬಳಿ ಮಲಗಳಲೆ ಗ್ರಾಮದಲ್ಲಿ ನಡೆದಿದೆ.

ಅಬಕಾರಿ ಇಲಾಖೆ ಭ್ರಷ್ಟ ಅಧಿಕಾರಿಗಳ ಹಾಗೂ ಉಳ್ಳವರ ಶಕ್ತಿಯಿಂದ ಮದ್ಯ ಮಾರಾಟ ಮಾಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದು ಕುಡುಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮದ್ಯ ಕುಡಿದು ಸಾವನಪ್ಪುವವರ ಸಂಖ್ಯೆಯು ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕೂಡಲೇ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ನಮ್ಮ ಗ್ರಾಮದ ಕಡೆ ಗಮನಹರಿಸಬೇಕು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂಬುವುದು ಗ್ರಾಮಸ್ಥರ ಮನವಿ.

Related Posts

Leave a Reply

Your email address will not be published.