ಆಳ್ವಾಸ್ ವಿದ್ಯಾರ್ಥಿ ಗಣೇಶ್ ಎಸ್ ಎಸ್ ಎಲ್ ಸಿಯಲ್ಲಿ ಟಾಪರ್
ಮೂಡುಬಿದಿರೆ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಣೇಶ್ ಹನುಮಂತಪ್ಪ ವೀರಪುರ್ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.
ಮೂಲತಃ ಬಾಗಲಕೋಟೆಯ ಇಳಕಲ್ಲ್ನ ಗಣೇಶ್, ಆಳ್ವಾಸ್ನ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಡಿ ಕಳೆದ 5 ವರ್ಷದಿಂದ ಉಚಿತ ಶಿಕ್ಷಣ ಪಡೆಯುತ್ತಿದ್ದಾನೆ. ಈತ ಹನುಮಂತಪ್ಪ-ಯಶೋಧ ದಂಪತಿಯ ಪುತ್ರ.
625 ಅಂಕದ ನಿರೀಕ್ಷೆ ಇರಲಿಲ್ಲ. ಮುಂದೆ ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುತ್ತೇನೆ. ವೈದ್ಯನಾಗುವ ಕನಸಿದೆ. ಆಳ್ವಾಸ್ನಲ್ಲಿ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಿದ್ದು, ನಿರಂತರ ಅಧ್ಯಯನದಿಂದ ಉತ್ತಮ ಅಂಕಪಡೆಯಲು ಸಾಧ್ಯವಾಗಿದೆ ಎಂದು ಗಣೇಶ್ ಅನಿಸಿಕೆ ವ್ಯಕ್ತಪಡಿಸಿದ್ದಾನೆ.