ಆಸ್ಕರಣ್ಣನಿಗೆ ಭಾವಪೂರ್ಣ ನಮನಗಳು: ಪಿ.ವಿ. ಮೋಹನ್
ಆಸ್ಕರಣ್ಣ ತೀರಿಕೊಂಡಿದ್ದಾರೆ. ಅವರನ್ನು ಕಾಣುವುದು ಇನ್ನು ಸಾಧ್ಯವಾಗುವುದೇ ಇಲ್ಲ. ನಮಗೆ ಕಾಣದ ದೂರದ ಲೋಕಕ್ಕೆ ಹೋಗಿದ್ದಾರೆ. ಈ ಪರಿಸ್ಥಿತಿ ಬರಬಹುದು ಎಂದೂ ಯೋಚಿಸಿರಲಿಲ್ಲ ; ಒಂದು miracle ಆಗಬಹುದೆಂದು ದಿನಗಳನ್ನು ಎದುರಿಸುತ್ತಿದ್ದೆವು. ಅವರ ಬದುಕು, ರಾಜಕೀಯ ಅನುಭವಗಳು ಒಂದು ತೆರೆನ ವಿಶಿಷ್ಟವಾದವು. ಬುದ್ದನಂತಹ, ಯೇಸುವಿನಂತಹ, ಗಾಂಧಿಯಂತಹ ವ್ಯಕ್ತಿ ಆಸ್ಕರಣ್ಣ ರಾಗಿದ್ದರು. ಅವರ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ನಷ್ಟವಲ್ಲ ಅದು ಇಡೀ ಮನುಕುಲಕ್ಕೆ ಆಗಿರುವ ದುರಂತ; ಅಷ್ಟು ಮೇರು ವ್ಯಕ್ತಿತ್ವದವರು ಆಸ್ಕರ್ ರಾಗಿದ್ದರು. ಅವರು ಮಾಡಿದಕ್ಕೆ ಯಾವುದೇ ಪ್ರಚಾರವಿಲ್ಲ.ಅದು ಅವರ ಬಯಕೆಯು ಕೂಡ ಆಗಿರಲಿಲ್ಲ. ಅದುದರಿಂದ ಕೊಂಕಣ ರೈಲ್ವೆಯ ನೈಜ ಜನಕರಾಗಿದ್ದ ಆಸ್ಕರ್ ಬಗ್ಗೆ ಎಲ್ಲೂ ಪ್ರಸ್ತಾಪ ವಿಲ್ಲ. ಆದರೆ ಲೋಕ ಸಭೆಯ ಕಡತ ಗಳನ್ನು ನೋಡಿದರೆ ಆಸ್ಕರಣ್ಣ ನ ಪಾತ್ರದ ಮಹತ್ವ ಅರಿವಾಗುತ್ತದೆ. ಈ ತರಹ ತೆರೆಮರೆಯಲ್ಲಿ ಕೆಲಸ ಮಾಡುವುದೇ ಅವರ ಜಾಯಮಾನ. ಅದರಿಂದಲೇ ಅವರು ಬಡ ಜನರ , ಕಾರ್ಯಕರ್ತರ ಹೃದಯ ಸಿಂಹಾಸನದಲ್ಲಿ ಇಂದಿಗೂ ಜಾಗ ಪಡೆದಿದ್ದಾರೆ. ನಿನ್ನೆ ಮೊನ್ನೆಯ ತನಕ ಹೈಕಮಾಂಡ್ ನ ಕಿವಿ , ಕಣ್ಣುಗಳಾಗಿದ್ದರು. ನೆಹರು ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ ಅವರು ರಾಜೀವ್ ಗಾಂಧಿ ಯುಗದ ಕೊನೆಯ ಕೊಂಡಿಯಾಗಿದ್ದರು. ಅಮರ್, ಅಕ್ಬರ್ ಮತ್ತು ಅಂತೋಣಿ ಎಂದು ರಾಜೀವ್ ಗಾಂಧಿ ಜತೆ ಗುರುತಿಸಿಕೊಂಡು ಹೆಸರುವಾಸಿಯಾದವರಲ್ಲಿ ಅರುಣ್ ಸಿಂಗ್ ಅವರು ಮೊದಲೇ ರಾಜೀವ ಬದುಕಿದ್ದಾಗಲೇ ಬಿಟ್ಟುಹೋಗಿದ್ದರು. ಅಕ್ಬರ್ ಎಂದೆಣಿಸಿದ ಅಹ್ಮದ್ ಪಟೇಲರು ಕಳೆದ ವರುಷ ಕೋವಿಡ್ ಗೆ ತುತ್ತಾದರು. ಇವರೆಲ್ಲಾರಿಗಿಂತ ಅಸಹಾಯಕರಿಗೆ ಆಶಾದೀಪವಾದವರು ಅಂತೋಣಿ ಎಂದು ಕರೆಸಿಕೊಂಡ ಆಸ್ಕರಣ್ಣ, ಅವರ ಕಣ್ಮರೆ ಬಹು ಕಾಲದ ತನಕ ಕಾಡಲಿದೆ. ನನ್ನಲ್ಲಿ ಪ್ರಭಾವವನ್ನು ಬೀರಿದ ಅವರನ್ನು ಕುರಿತ ಗಾಢವಾದ ವಿಚಾರ, ಅವರ ಬದುಕು, ಶೈಲಿ ಎಲ್ಲವೂ ನಮ್ಮ ಜನಾಂಗ ಕ್ಕೆ ಸೇರಿದ ಎಲ್ಲಾ ಮತದ ಯುವ ಜನತೆಗೆ ಉಪಯುಕ್ತ ವಾಗ ಬಲ್ಲದು. ಮನುಕುಲದ ನಕ್ಷತ್ರ ಕ್ಕೆ ನನ್ನ ಭಾವಪೂರ್ಣ ನಮನಗಳು.
ಪಿ.ವಿ. ಮೋಹನ್ ಕಾಂಗ್ರೆಸ್ ಮುಖಂಡರು