ಇಂದಿನಿಂದ ಪೂರ್ವ ಪ್ರಾಥಮಿಕ, ಅಂಗನವಾಡಿ ಆರಂಭ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಕಲರವ ಮನೆಮಾಡಿದೆ. ಇಂದಿನಿಂದ ಅಂಗನವಾಡಿ, ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಆರಂಭವಾಗಿದ್ದು ಮಕ್ಕಳ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು ಮನೆಗೆ ನೀಡಲಾಗುವುದು. 15 ದಿನಗಳ ಅನಂತರ ಪರಿಸ್ಥಿತಿಯನ್ನು ಅವಲೋಕಿಸಿ ಪೌಷ್ಟಿಕ ಆಹಾರವನ್ನು ಕೇಂದ್ರದಲ್ಲಿಯೇ ನೀಡಲಾಗುತ್ತದೆ.ಎಲ್‍ಕೆಜಿ ಹಾಗೂ ಯುಕೆಜಿಯು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9.30ರಿಂದ ಅಪರಾಹ್ನ 3.30ರ ವರೆಗೆ ನಡೆಸಲು ಸೂಚನೆ ನೀಡಲಾಗಿದೆ. ತರಗತಿಗಳನ್ನು ಸಿಂಗರಿಸಲಾಗಿದ್ದು, ಪುಟಾಣಿಗಳ ಸ್ವಾಗತಕ್ಕೆ ಸಕಲ ತಯಾರಿ ಮಾಡಲಾಗಿದೆ.

Related Posts

Leave a Reply

Your email address will not be published.