ಇಂದಿನಿಂದ ಪ್ರಾಥಮಿಕ ಶಾಲೆ ಆರಂಭ : ಬೆಳ್ತಂಗಡಿಯಲ್ಲಿ ಆರತಿ ಬೆಳಗಿ ಮಕ್ಕಳಿಗೆ ಸ್ವಾಗತ

ಬೆಳ್ತಂಗಡಿ ತಾಲೂಕಿನಲ್ಲಿ ೧ರಿಂದ ೫ತರಗತಿಯವರೆಗೆ ಎಲ್ಲಾ ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಆಗಮಿಸಿದರು.ತಾಲೂಕಿನ ನಿಡ್ಲೆ ಸರಕಾರಿ ಶಾಲಾ ಮಕ್ಕಳನ್ನು ತಮ್ಮ ಪೋಷಕರು ಆರತಿ ಬೆಳಗಿ ಬರಮಾಡಿ ಕೊಂಡರು.ಶಾಲಾ ಸಿಬ್ಬಂದಿಗಳು ಶಾಲೆಯನ್ನು ಹೂವುಗಳಿಂದ ಅಲಂಕರಿಸಿದರು.ಪೋಷಕರು ಮಾತನಾಡಿ ಕೊರೋಣದಿಂದ ಮಕ್ಕಳಿಗೆ ಶಾಲೆಗೆ ರಜೆ ಇತ್ತು .ಆದರೆ ಇವತ್ತಿನಿಂದ ಮಕ್ಕಳು ಬಹಳ ಸಂತೋಷದಿಂದ ಶಾಲೆಗೆ ಬಂದಿದ್ದಾರೆ,ಎಂದು ಹೇಳಿದರು.ನಂತರ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಾಸಂತಿಯವರು ಮಾತನಾಡಿ ನಮ್ಮ ಶಿಕ್ಷಕ ವೃಂದದವರು ಕೊರೋಣದ ಸಂದರ್ಭದಲ್ಲಿ ಎಲ್ಲಾ ಮಕ್ಕಳಿಗೆ ಮನೆಯಲ್ಲಿ ಪಾಠ ಮಾಡುವ ಮೂಲಕ ಆದಷ್ಟು ಮಕ್ಕಳನ್ನು ವಿದ್ಯೆಯಿಂದ ವಂಚಿತ ಆಗದ ರೀತಿ ನೋಡಿ ಕೊಂಡಿದ್ದೇವೆ. ಇನ್ನು ಮುಂದೆಯೂ ಇದೇರೀತಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಲು ಪೆಯತ್ನಿಸುತ್ತೆವೆ ಎಂದು ಹೇಳಿದರು.

Related Posts

Leave a Reply

Your email address will not be published.