ಇಸ್ರೇಲ್ ಪತ್ತೇದಾರಿ ಸಾಫ್ಟ್‌ವೇರ್ ಪೆಗಾಸಸ್ ವಿಚಾರ : ಮಂಜೇಶ್ವರದಲ್ಲಿ ಎಐವೈ ಎಫ್‌ನಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಸೇರಿದಂತೆ ದೂರವಾಣಿ ವಿವರಗಳನ್ನು ಸೋರಿಕೆ ಮಾಡಿರುವುದು ಅತ್ಯಂತ ಗಂಭೀರವಾಗಿದೆ.ಇರ ವಿರುದ್ಧ ಎ ಐ ವೈ ಎಫ್ ಮಂಜೇಶ್ವರ ಮಂಡಲ ಸಮಿತಿಯ ವತಿಯಿಂದ ಹೊಸಂಗಡಿಯಲ್ಲಿ ಪ್ರತಿಭಟನಾ ಧರಣಿ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ ಕೃಷ್ಣನ್ ಪೆಗಾಸಸ್ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೇವೆ ಸಲ್ಲಿಸುತ್ತದೆ. ಆದ್ದರಿಂದ ಕೇಂದ್ರ ಸಚಿವರು ಸೇರಿದಂತೆ ಜನರ ದೂರವಾಣಿ ವಿವರಗಳನ್ನು ಕೇಂದ್ರ ಸರ್ಕಾರ ಸೋರಿಕೆ ಮಾಡುವುದು ಸುಲಭವಲ್ಲ. ಇದು ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ಪತ್ರಕರ್ತರ ಫೋನ್‌ಗಳು ಸೋರಿಕೆಯಾಗಿವೆ. ಮೋದಿ ಸರ್ಕಾರವು ’ಪ್ರಜಾಪ್ರಭುತ್ವ’ ಎಂಬ ಪದವನ್ನು ಅಪ್ರಸ್ತುತಗೊಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ayif protest in manjeshwara

ಎ ಐ ವೈ ಎಫ್ ಮಂಡಲ ಅಧ್ಯಕ್ಷ ದಯಾಕರ್ ಮಾಡ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಸುಕುಮಾರ್ ಮುಳ್ಳೇರಿಯ ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್ ಕೆ ಂIಙಈ ಜಿಲ್ಲಾ ಸಮಿತಿ ಸದಸ್ಯರಾದ ಹರೀಶ್ ಕೆ ಆರ್ ಮನು ಪುತ್ತಿಗೆ, ಅಜಿತ್ ಎಂ ಸಿ ಲಾಲ್ ಬಾಗ್ ಮೊದಲಾದವರು ನೇತೃತ್ವ ನೀಡಿದರು.

 

Related Posts

Leave a Reply

Your email address will not be published.