ಉಳ್ಳಾಲ : ಮನವಿ ಸಲ್ಲಿಸಿದ್ದರೂ ಸ್ಪಂಧಿಸದ ಉಳ್ಳಾಲ ನಗರಸಭೆ – ಕುಸಿದುಬಿದ್ದ ಮನೆ ಮಹಡಿ, ಮನೆಮಂದಿಗೆ ಗಾಯ

ಉಳ್ಳಾಲ : ಮದನಿನಗರ ಬಳಿ ಕಂಪೌಂಡ್ ವಾಲ್ ಬಿದ್ದು ನಾಲ್ವರು ಮೃತಪಟ್ಟ ಬೆನ್ನಲ್ಲೇ ಉಳ್ಳಾಲ ನಗರಸಭಗೆ ಕೌನ್ಸಿಲರ್ ಓರ್ವರು ಅಪಾಯದಂಚಿನಲ್ಲಿರುವ ಮನೆಮಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದ್ದು, ಮನವಿಗೆ ಸ್ಪಂಧಿಸದ ಹಿನ್ನೆಲೆಯಲ್ಲಿ ಇಂದು ಮನೆ ಮಹಡಿ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿದಂತೆ ತಂದೆ ಗಾಯಗೊಂಡ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ ಮೇಲಂಗಡಿ ಮಸೀದಿ ಸಮೀಪ ನಡೆದಿದೆ.

ಮನೆಯೊಳಗಿದ್ದ ಅಬ್ಬಾಸ್ ಹಾಗೂ ಅವರ ಪುತ್ರಿ ಮನೆ ಕುಸಿತದ ಸಂದರ್ಭ ಅವಶೇಷಗಳಡಿ ಸಿಲುಕಿ ಗಾಯಗೊಂಡಿದ್ದಾರೆ.

ಮೇಲಂಗಡಿಯಲ್ಲಿರುವ ಖತೀಜಾ ಎಂಬವರಿಗೆ ಸೇರಿದ ಹಂಚಿನ ಮನೆ ನಾದುರಸ್ಥಿಯಲ್ಲಿದ್ದು, ಅವರಿಗೆ ದೃಷ್ಟಿಯ ದೋಷವಿದೆ. ಪುತ್ರ ಅಬ್ಬಾಸ್ ಅವರು ಕೂಲಿ ಕಾರ್ಮಿಕರಾಗಿದ್ದು, ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿರುವುದರಿಂದ ಮನೆಯನ್ನು ದುರಸ್ಥಿಗೊಳಿಸುವಂತೆಯೂ, ಇಲ್ಲವೇ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ವಾಡ್೯ ಸಂಖ್ಯೆ11/ರ ಖಮರುನ್ನೀಸಾ ನಿಝಾಮ್ ಎಂಬವರು ಜು.16 ಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಈವರೆಗೂ ನಗರಸಭೆ ಪೌರಾಯುಕ್ತರು ಸ್ಪಂಧಿಸದೇ ಇದ್ದು, ಇಂದು ಮನೆ ಕುಸಿದು ಮನೆಮಂದಿ ಗಾಯಗೊಂಡಿದ್ದಾರೆ.

add - Anchan ayurvedic

Related Posts

Leave a Reply

Your email address will not be published.