ಉಳ್ಳಾಲ : ಮನೆಗೆ ನುಗ್ಗಿ ಬೆಲೆ ಬಾಳುವ ಸೊತ್ತು ಕಳವು
ಉಳ್ಳಾಲ: ಮನೆಗೆ ನುಗ್ಗಿದ ಕಳ್ಳರು ಲಕ್ಷ ಬೆಲೆಬಾಳುವ ಸೊತ್ತುಗಳನ್ನು ಕಳವು ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ವಿದೇಶದಲ್ಲಿ ವಾಸವಿರುವ ಸುಜಾತಾ ಎಂಬವರ ಮನೆಯಲ್ಲಿ ಕಳವು ನಡೆದಿದೆ.ಲಕ್ಷ ಬೆಲೆಬಾಳುವ ಮೂರು ಕಂಚಿನ ದೀಪಗಳನ್ನು ಕಳ್ಳರು ಕಳವು ನಡೆಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿರುವ ಬಗ್ಗೆ ತಿಳಿದು ಕಳ್ಳರು ಕೃತ್ಯ ಎಸಗಿದ್ದಾರೆ. ಹಿಂಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಹುಡುಕಾಡಿ ಬಳಿಕ ಏನೂ ಸಿಗದಿದ್ದಾಗ ಮೂರು ಬೃಹತ್ ಗಾತ್ರದ ಕಂಚಿನ ದೀಪಗಳನ್ನು ಕಳವು ನಡೆಸಿದ್ದಾರೆ. ರಬ್ಬರ್ ತೋಟದ ನಡುವೆ ಇರುವ ಬೃಹತ್ ಮನೆಯವರೆಲ್ಲರೂ ವಿದೇಶದಲ್ಲಿದ್ದು, ಸಂಬಂಧಿಕರು ಎರಡು ದಿನಕ್ಕೊಮ್ಮೆ ಬಂದು ನೋಡಿ ಹೋಗುತ್ತಿದ್ದರು. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.