ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿ : ಭಗತ್‍ಸಿಂಗ್‍ರವರ 114ನೇ ಜನ್ಮದಿನಾಚರಣೆ

ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿ ಯಿಂದ ಭಗತ್‍ಸಿಂಗ್‍ರವರ 114ನೇ ಜನ್ಮದಿನಾಚರಣೆ ಯನ್ನು ಆಚರಿಸಲಾಯಿತು. ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷರಾದ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡುತ್ತಾ ಭಗತ್‍ಸಿಂಗ್ ಕಂಡ ಕನಸು ನನಸಾಗಿಸಲು ಇಂದಿನ ವಿದ್ಯಾರ್ಥಿ ಯುವಜನರು ಸಂಕಲ್ಪ ತೊಡಬೇಕು ಭಗತ್‍ಸಿಂಗ್ ಅವರು ಕನಸು ಬ್ರಿಟಿಷರು ಭಾರತ ಬಿಟ್ಟು ತೊಲಗಿದರೆ ಸಾಕಾಗುವುದಿಲ್ಲ ಒಂದು ಸಮಾಜವಾದ ರಾಷ್ಟ್ರವನ್ನು ನಿರ್ಮಾಣ ಮಾಡಬೇಕೆಂಬುವುದಾಗಿತ್ತು. ಎಲ್ಲ ಬಡಜನರಿಗೆ ಮೂಲಭೂತ ಅವಶ್ಯಕತೆಗಳು ಸಮಾನವಾಗಿ ಹಂಚಿಕೆಯಾಗಬೇಕೆಂದು ಬಯಸಿದರು. ಅಂತಹ ಸಮಾಜ ನಿರ್ಮಾಣಕ್ಕಾಗಿ ಪಣತೊಡಬೇಕೆಂದು ಕರೆ ನೀಡಿದರು. ಮೈಸೂರಿನಲ್ಲಿ ರಾಜ್ಯಾಧ್ಯಕ್ಷರಾದ ಎಮ್. ಉಮಾದೇವಿ, ಬೆಂಗಳೂರಿನಲ್ಲಿ ರಾಜ್ಯಕಾರ್ಯದರ್ಶಿಗಳಾದ ಡಾ. ಜಿ. ಶಶಿಕುಮಾರ ರಾಯಚೂರಿನಲ್ಲಿ ಎಐಡಿವೈಒ ಉಪಾಧ್ಯಕ್ಷರಾದ ಶರಣಬಸಪ್ಪ ಉದ್ಬಾಳ್ ಬಳ್ಳಾರಿಯಲ್ಲಿ ಎಐಡಿವೈಒ ಉಪಾಧ್ಯಕ್ಷರಾದ ರಾಧಾಕೃಷ್ಣ ಉಪಾಧ್ಯೆ ಎಐಡಿವೈಒ ಕಾರ್ಯಕಾರಿ ಸಮಿತಿ ಸದಸ್ಯರಾದ ಸಿದ್ಧಲಿಂಗ ಬಾಗೇವಾಡಿ, ಚನ್ನಬಸವ ಜಾನೇಕಲ್, ಜಗನ್ನಾಥ್, ಕೃಷ್ಣಾ, ವಿನಯ್, ಜಯಣ್ಣ ಮುಂತಾದವರು ಭಾಗವಹಿಸಿದ್ದರು.

Related Posts

Leave a Reply

Your email address will not be published.