ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಜೈನಮಿಲನ್ ’ಸಂಮಿಲನ್ 2021
ಮೂಡುಬಿದಿರೆ: ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ಹಾಗೂ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ’ಸಂಮಿಲನ್ ‘2021’ಕ್ರೀಡಾಕೂಟವು ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕ್ಯಾಂಪಸ್‌ನಲ್ಲಿ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ವೀರಸಾಗರ ಸಭಾಂಗಣದಲ್ಲಿ ಸಂಮಿಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೈನ ಸಮುದಾಯದವರು ಇಂದು ಸುಶಿಕ್ಷಿತರಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಶಿಕ್ಷಣ, ಉದ್ಯಮ, ಸಮಾಜಸೇವೆಯಲ್ಲಿ ತೊಡಗಿ ಇಂದು ಸಮಾಜಕ್ಕೆ ಮಾದರಿಯಾಗಿ ಸಮುದಾಯದವರು ಕಾಣಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಭಾರತೀಯ ಜೈನ್ ಮಿಲನ್ ವಲಯ 8 ಪ್ರಧಾನ ಕಾರ್ಯದರ್ಶಿ ರಾಜೇಶ್ ಎಂ. , ವಲಯ ನಿರ್ದೇಶಕ ಜಯರಾಜ್ ಕಂಬ್ಳಿ ಮುಖ್ಯ ಅತಿಥಿಯಾಗಿದ್ದರು.
ಎಕ್ಸಲೆಂಟ್ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಜೈನ್ ಮಿಲನ್ ಮೂಡುಬಿದಿರೆ ವಲಯ ಅಧ್ಯಕ್ಷ ನಮಿರಾಜ್ ಜೈನ್, ಅತಿಥೇಯರಾದ ಶಿಶುಪಾಲ್ ಶೆಟ್ಟಿ, ಶೈಲೇಶ್ಚಂದ್ರ, ಕಾರ್ಯದರ್ಶಿ ಜಿನೇಂದ್ರ ಹೆಗ್ಡೆ, ಕೋಶಾಧಿಕಾರಿ ಮಿತ್ರಸೇನ ಉಪಸ್ಥಿತರಿದ್ದರು.ಡಾ.ಪ್ರಬಾತ್ ಬಲ್ನಾಡ್ ಕಾರ್ಯಕ್ರಮ ನಿರೂಪಿಸಿದರು.ಪೂರ್ವ ಅಧ್ಯಕ್ಷ ನಿರಂಜನ್ ಕುಮಾರ್ ಶೆಟ್ಟಿ ವಂದಿಸಿದರು.