ಎರ್ಮಾಳ್ನಲ್ಲಿ ಕೊರೋನಾ ವಾರಿಯರ್ಸ್ಗೆ ಕಿಟ್ ವಿತರಣೆ
ಕೊರೋನಾ ವೈರಾಣು ಸಮಸ್ಯೆಯಿಂದಾಗಿ ಅನಿವಾರ್ಯ ವಾಗಿ ಆದ ಲಾಕ್ ಡೌನ್ ನಿಂದ ತೊಂದರೆಗೆ ಸಿಲುಕಿದವರಲ್ಲಿ ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆ ಯರು ಮೊದಲಿಗರು, ಅವರ ಕಷ್ಟಗಳ ಗಳನ್ನು ಮನಗಂಡು ಅವರಿಗೆ ಆಹಾರ ಕಿಟ್ ನೀಡಿರುವುದು ಶ್ಲಾಘನೀಯ ಎಂಬುದಾಗಿ ಶಾಸಕ ಲಾಲಾಜಿ ಮೆಂಡನ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಅವರು ಎರ್ಮಾಳು ತೆಂಕ ಎಲ್ಲದಡಿ ಶಿವಪ್ರಸಾದ್ ಶೆಟ್ಟಿ ಮನೆಮಂದಿ ಕೊಡ ಮಾಡಿದ ಕಿಟ್ಟನ್ನು ವಿತರಿಸಿ ಮಾತನಾಡಿದರು. ಅನಿವಾರ್ಯ ಸ್ಥಿತಿ ಹೊರತು ಪಡಿಸಿ ಜನ ಮನೆಯಲ್ಲೇ ಇದ್ದು ಕೊರೋನಾ ಮುಕ್ತರಾಗಿರೋಣ, ನಾವು ಎಚ್ಚರದಿಂದ ಇರುವ ಮೂಲಕ ಮನೆಮಂದಿಗೆ ಕೊರೋನಾ ಬಾರದಂತೆ ವ್ಯವಹರಿಸೋಣ ಎಂಬುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭ ಶಿವಪ್ರಸಾದ್ ಶೆಟ್ಟಿ, ಶೀಲಾ ಕೆ. ಶೆಟ್ಟಿ, ವಿನಯ ಶೆಟ್ಟಿ, ಮನೋಜ್ ಶೆಟ್ಟಿ, ಕಸ್ತೂರಿ ಮುಂತಾದವರಿದ್ದರು.