ಐಡಿಯಲ್ ಐಸ್ಕ್ರೀಂ ಸ್ಥಾಪಕರಾದ ಪ್ರಭಾಕರ್ ಕಾಮತ್ : ವಾಹನ ಡಿಕ್ಕಿಯಾಗಿ ಆಸ್ಪತ್ರೆಗೆ ದಾಖಲು
ಮಂಗಳೂರಿನ ಪ್ರತಿಷ್ಠಿತ ಐಡಿಯಲ್ ಐಸ್ಕ್ರೀಂ ಸ್ಥಾಪಕರಾದ ಪ್ರಭಾಕರ್ ಕಾಮತ್ರವರು ಇತ್ತೀಚೆಗೆ ರಾತ್ರಿ 8.30ರ ಸುಮಾರಿಗೆ ವಾಕಿಂಗ್ ಮುಗಿಸಿ ಬಾಳಿಗಾ ಸ್ಟೋರ್ಸ್ಗೆ ಸಮಾಗ್ರಿ ಖರೀದಿಗೆ ಅಂಗಡಿಯ ಮುಂಭಾಗದಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್ನಲ್ಲಿ ಬಂದ ಝೋಮಾಟೋ ಹುಡುಗ ಅವರಿಗೆ ಡಿಕ್ಕಿ ಹೊಡೆದು ತಲೆಗೆ ಗಾಯವಾಗಿ ತೀರ್ವ ರಕ್ತಸ್ರಾವವಾಗಿದ್ದು ಕೂಡಲೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದು. ಅವರ ತಲೆಯ ಎಡಭಾಗಕ್ಕೆ ಗಾಯವಾಗಿದ್ದು. ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ತೀವೃ ನಿಗಾ ಘಟಕದಲ್ಲಿ ಇರಿಸಲಾಗಿದ್ದು. ಮುಖ್ಯ ವೈದ್ಯರಾದ ಡಾ. ಮುರಳೀಧರ ಪೈ ಅವರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ.