ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ’ಕೆಸರ್ದ ಕಂಡೊಡೊಂಜಿ ದಿನ’ ಆಟೋಟ ಸ್ಪರ್ಧೆ
ಪ್ರಕೃತಿಯೇ ವಿಶ್ವವಿದ್ಯಾನಿಲಯ. ಮರ, ನದಿ ಕೂಡಾ ಪರೋಪಕಾರ ಮನೋಭಾವವನ್ನು ಬೆಳೆಸುತ್ತದೆ. ಪ್ರಕೃತಿ ನಾಶವಾಗಬಾರದು. ಅದರ ಜತೆಗೆ ಬದುಕು ಸಾಗಬೇಕು. ಪ್ರಕೃತಿ ಸಮತೋಲನ ಕಾಪಾಡುತ್ತದೆ. ಪ್ರಕೃತಿಯನ್ನು ಸ್ವಚ್ಛವಾಗಿಡುವುದು ಕರ್ತವ್ಯ ಮತ್ತು ಪರಿಣಾಮವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆಧ್ಯಾತ್ಮದ ಚಿಂತನೆ ಮೂಲಕ ಜೀವನ ಪಾವನವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು.
ಅವರು ಒಡಿಯೂರು ಶ್ರೀಗಳ ಜನ್ಮದಿನೋತ್ಸವ – ಗ್ರಾಮೋತ್ಸವದ ಅಂಗವಾಗಿ ಕನ್ಯಾನ ಗ್ರಾಮದ ಬನಾರಿಯಲ್ಲಿರುವ ಶ್ರೀಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ’ ಕೆಸರ್ದ ಕಂಡೊಡೊಂಜಿ ದಿನ’ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.ಸಾ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಲಾರು ಜಯರಾಮ ರೈ, ಜನ್ಮದಿನೋತ್ಸವ ಸಮಿತಿ ಕೋಶಾಽಕಾರಿ ಲೋಕನಾಥ್ ಜಿ.ಶೆಟ್ಟಿ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಎ.ಸುರೇಶ್ ರೈ, ಸಿಇಒ ದಯಾನಂದ ಶೆಟ್ಟಿ ಬಾಕ್ರಬಲು, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಶ್ರೀ ಗುರುದೇವ ವಿದ್ಯಾ ಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಐಟಿಐ ಪ್ರಾಂಶುಪಾಲ ಪ್ರವೀಣ್ ಕುಮಾರ್, ಶ್ರೀ ಗುರುದೇವ ವಿದ್ಯಾ ಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ, ತೀರ್ಪುಗಾರರಾದ ಚಂದ್ರಹಾಸ ಶೆಟ್ಟಿ ಅಳಿಕೆ, ರವೀಂದ್ರ ಅಳಿಕೆ, ಕ್ರೀಡೋತ್ಸವ ಸಮಿತಿ ಸಂಚಾಲಕ ಶಶಿಧರ ಶೆಟ್ಟಿ, ಹರಿಣಾಕ್ಷಿ ಜೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿ, ಒಡಿಯೂರುಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು. ಗ್ರಾಮವಿಕಾಸ ಯೋಜನೆಯ ಪಿ.ಆರ್.ಓ. ಮಾತೇಶ್ ಭಂಡಾರಿ, ಕಾರ್ಯಕ್ರಮ ನಿರೂಪಿಸಿದರು.