ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ. ಸಿಂಧು
ಭಾರತಕ್ಕೆ ಟೋಕಿಯೋ ಒಲಂಪಿಕ್ಸ್ ನಲ್ಲಿ ಮತ್ತೊಂದು ಪದಕವನ್ನು ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಗೆಲ್ಲುವ ಮೂಲಕ ಹೊತ್ತು ತಂದಿದ್ದಾರೆ. ತೀವ್ರ ಹಣಾಣಿಯಲ್ಲಿ ಟೋಕಿಯೋ ಒಲಂಪಿಕ್ಸ್ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಸತತ ಎರಡನೇ ಬಾರಿಗೆ ಕಂಚಿನ ಪದಕವನ್ನು ಗೆದ್ದ ಸಾಧನೆ ಮಾಡಿದ್ದಾರೆ. ಭಾನುವಾರ ಕಂಚಿನ ಪದಕ ಸಲುವಾಗಿ ನಡೆದ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಆಟ ಹೊರತಂದ ಸಿಂಧೂ, ವಿಶ್ವದ ಮಾಜಿ 3ನೇ ಶ್ರೇಯಾಂಕಿತ ಆಟಗಾರ್ತಿ ಚೀನಾದ ಹಿ ಬಿಂಗ್ ಜಿಯಾವ್ ಅವರ ಸವಾಲನ್ನು ಮೆಟ್ಟಿನಿಂತರು. ಎದುರಾಳಿಯ ತಂತ್ರಕ್ಕೆ ಪ್ರತಿ ತಂತ್ರವೊಡ್ಡಿ, ತಮ್ಮ ಬಲಿಷ್ಠ ಸ್ಮ್ಯಾಷ್ಗಳೊಂದಿಗೆ ಮಿಂಚಿನ ಆಟವಾಡಿದ ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧೂ 21-13, 21-15 ಅಂತರದ ಗೇಮ್ಗಳಿಂದ ಪಂದ್ಯ ಗೆದ್ದುಕೊಂಡರು. ಜಿದ್ದಾಜಿದ್ದಿನ ಪೈಪೋಟಿ ಮೂಡಿ ಬಂದಿತ್ತಾದರೂ ಪಂದ್ಯದಲ್ಲಿ ಎಲ್ಲಿಯೂ ಕೂಡ ಎದುರಾಳಿಗೆ ಒಂದು ಅಂಕ ಮುನ್ನಡೆಗಳಿಸುವ ಅವಕಾಶವನ್ನೂ ಕೊಡದೆ ಸ್ಮರಣೀಯ ಗೆಲುವನ್ನು ತಮ್ಮದಾಗಿಸಿಕೊಂಡರು.