ಒಲಿಂಪಿಕ್ಸ್‌ನಲ್ಲಿ ಭಾರತ ಶುಭಾರಂಭ : ವೇಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ

ಒಲಿಂಪಿಕ್ಸ್‌ನ ಮೊದಲ ದಿನದಂದು ಪದಕದ ಬೇಟೆ ಆರಂಭಿಸಿದೆ. ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರು. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಚೀನಾದ ಝಿಹುಯಿ ಸ್ನ್ಯಾಚ್ ಹಾಗೂ ಕ್ಲೀನ್ ಮತ್ತು ಜೆರ್ಕ್ ಎರಡರಲ್ಲೂ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. ಕ್ಲೀನ್ ಹಾಗೂ ಜರ್ಕ್ ನಲ್ಲಿ ಒಟ್ಟು 110 ಕೆಜಿ ಎತ್ತಿ ಹಿಡಿದಿರುವ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವನ್ನು ದೃಢಪಡಿಸಿದ್ದರು. ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಆದರೆ89ಕೆಜಿ ಭಾರ ಎತ್ತಲು ವಿಫಲರಾದರು. ಚೀನಾದ ಝಿಹುಯಿ ನಂತರ ದ್ವಿತೀಯ ಸ್ಥಾನ ಪಡೆದರು.olympics 2021

2014 ರಿಂದ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ನಿಯಮಿತ ಉಪಸ್ಥಿತಿಯಲ್ಲಿರುವ ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವಿಶ್ವ ಚಾಂಪಿಯನ್‌ಶಿಪ್ ಮತ್ತು ಬಹು ಪದಕಗಳನ್ನು ಗೆದ್ದಿದ್ದಾರೆ. ಏಪ್ರಿಲ್‌ನಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಾನು ಕ್ಲೀನ್ ಮತ್ತು ಜರ್ಕ್‌ನಲ್ಲಿ ವಿಶ್ವ ದಾಖಲೆ ಬರೆದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. 2018ರಲ್ಲಿ ಬೆನ್ನು ನೋವಿಗೆ ತುತ್ತಾಗಿರುವ ಮೀರಾ ಬಾಯಿ, ಒಂಬತ್ತು ತಿಂಗಳುಗಳಿಂದ ಕ್ರೀಡೆಯಿಂದ ದೂರವುಳಿದಿದ್ದರು. ಇದರಿಂದಾಗಿ ಮತ್ತೆ ಸ್ಪರ್ಧಾ ಜಗತ್ತಿಗೆ ಮರಳುವರೇ ಎಂಬ ಸಂದೇಹ ಮೂಡಿತ್ತು. ಆದರೆ ಆ ಬಳಿಕ ಕ್ರೀಡಾ ಜಗತ್ತಿಗೆ ಪುನರಾಗಮನವನ್ನು ಸಾರಿದ್ದರು.

Related Posts

Leave a Reply

Your email address will not be published.