ಕಡಬ ತಹಶಿಲ್ದಾರ್ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

ಕಡಬ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿ ಆಚರಣೆ ಕಡಬ ತಹಶಿಲ್ದಾರ್ ಕಛೇರಿಯಲ್ಲಿ ನಡೆಯಿತು. ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ

ಸಲ್ಲಿಸಿದ ಕಡಬ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ತಹಶಿಲ್ದಾರ್ ಅನಂತಶಂಕರ್ ಮಾತನಾಡಿ ಗಾಂಧೀಜಿವರು ತತ್ವಾದರ್ಶ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಇಂದಿನ ಯುವಜನತೆ ಹಿಂದೆ ಬೀಳುತ್ತಿದೆ. ಸಮಗ್ರಭಾರತವನ್ನು ಸದೃಢವಾಗಿ ಕಟ್ಟುವಲ್ಲಿ ಯವಜನರ ಪಾತ್ರ ಮಹತ್ವದಾಗಿದ್ದು , ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರಗೊಳಿಸುವಲ್ಲಿ ಯುವಜನತೆ ಸಂಕಲ್ಪ ಮಾಡಬೇಕು ಎಂದರು.

ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ ಶುಭ ಹಾರೈಸಿದರು.ಉಪತಹಶಿಲ್ದಾರ್ ನವ್ಯ, ದ್ವಿತೀಯ ದರ್ಜೆ ಗುಮಾಸ್ತ ಲಿಖೇಶ್, ಅಟಲ್‍ಜಿ ಆಪರೇಟರ್, ರವಿ ಶೆಟ್ಟಿ, ಗ್ರಾಮಕರಣಿಕರಾದ ರವಿಚಂದ್ರ, ಸಂತೋಷ್, ಲಲಿತಾ, ಗ್ರಾಮಸೇವಕರಾದ ಉದಯ ಕುಮಾರ್, ರಮೇಶ್ ಹೊಸಮನೆ, ವಿಜಯ ಕುಮಾರ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.