ಕಬಕದಲ್ಲಿ ಸ್ವಾತಂತ್ರ್ಯ ರಥಕ್ಕೆ ತಡೆ ವಿಚಾರ : ಹಿಂದೂ ಕಾರ್ಯಕರ್ತರಿದಂದ ಪ್ರತಿಭಟನೆ
ಪುತ್ತೂರು: 75ನೇ ವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪುತ್ತೂರು ತಾಲೂಕಿನ ಕಬಕ ಗ್ರಾ .ಪಂ ನ ಆವರಣದಿಂದ ಹೊರಟ ಸ್ವರಾಜ್ ರಥದಲ್ಲಿ ವೀರ್ ಸಾರ್ವಕರ್ ರವರ ಭಾವಚಿತ್ರ ಇದೆಯೆಂದು ಆಕ್ಷೇಪಿಸಿ ಎಸ್.ಡಿಪಿ.ಐ ಪಕ್ಷವೊಂದರ ಕೆಲ ಕಾರ್ಯಕರ್ತರು ತಡೆಯೊಡಿದ್ದ ಘಟನೆಯಿಂದ ಕೆರಳಿರುವ ಹಿಂದೂ ಪರ ಸಂಘಟನೆಗಳ ಹಾಗೂ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಕಬಕ ಪೇಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಿದರು.
ನಗರಸಭೆ ಅಧ್ಯಕ್ಷರಾದ ಜೀವಂಧರ್ ಜೈನ್, ನಗರ ಸಭೆ ಸದಸ್ಯರಾದ ಜಗನ್ನಿವಾಸ್ ರಾವ್ . ವಿಹಿಂಪ ಹಾಗೂ ಬಜರಂಗದಳದ ಮುಖಂಡರಾದ ಶರಣ್ ಪಂಪ್ ವೆಲ್, ಮುರಳಿಕೃಷ್ಣ ಹಸಂತಡ್ಕ, ಕೃಷ್ಣ ಪ್ರಸನ್ನ, ಹಿಂದೂ ಜಾಗರಣೆ ವೇದಿಕೆ ಜಿಲ್ಲಾ ಮುಖಂಡರುಗಳಾದ ಚಿನ್ಮಯ್ ರೈ, ಅಜಿತ್ ರೈ ಹೊಸಮನೆ, ನರಸಿಂಹ ಶೆಟ್ಟಿ ಮಾಣಿ, ಗಣರಾಜ್ ಭಟ್ ಬಿಜೆಪಿ ನಾಯಕರಾದ ಸಾಜ ರಾಧಾಕೃಷ್ಣ ಆಳ್ವ, ಆರ್ ಸಿ ನಾರಾಯಣ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.