ಕಬಕ ಗ್ರಾ.ಪ.ನಲ್ಲಿ ಸ್ವಾತಂತ್ರ್ಯ ರಥಕ್ಕೆ ಎಸ್.ಡಿ.ಪಿ.ಐ ಕಾರ್ಯಕರ್ತರಿಂದ ತಡೆ: ಗುಂಪು ಚದುರಿಸಿದ ಪೊಲೀಸರು

ಪುತ್ತೂರು: ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಲಿರುವ ಸ್ವಾತಂತ್ರ್ಯ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಎಸ್ ಡಿ.ಪಿ.ಐ ಕಾರ್ಯರ್ತರು ತಡೆ ಒಡ್ಡಿದ ಘಟನೆ ನಡೆದಿದೆ.

 

ಗ್ರಾಮ ಪಂಚಾಯತ್ ರಥಕ್ಕೆ ಕಬಕ ಗ್ರಾಮ ಪಂಚಾಯತ್ ವಠಾರದಲ್ಲಿ ಗ್ರಾ.ಪಂ. ಅಧ್ಯಕ್ಷರು ಚಾಲನೆ ನೀಡಿ ಜೈಕಾರ ಹಾಕುತ್ತಿದ್ದಂತೆ ಎಸ್.ಡಿ.ಪಿ.ಐ. ಕಾರ್ಯಕರ್ತರು ದಿಕ್ಕಾರ ಕೂಗಿ ಸ್ವಾತಂತ್ರ್ಯ ರಥಕ್ಕೆ ತಡೆ ಒಡ್ಡಿದ್ದಾರೆ. ಈ ವೇಳೆ ಪರಸ್ಪರ ವಾಗ್ವಾದ ನಡೆದಿದ್ದು, ಗ್ರಾ.ಪಂ ಅಧ್ಯಕ್ಷರು ಹಾಗೂ ಪಿಡಿಒ ರವರು ಸಮಾಧಾನ ಮಾಡಿದರು ಕೇಳಿಸಿಕೊಳ್ಳದ ತಂಡ ವೀರ ಸಾವರ್ಕರ್ ಫೋಟೊ ತೆಗೆದು ಟಿಪ್ಪು ಸುಲ್ತಾನ್ ಫೋಟೊ ಅಳವಡಿಸುವಂತೆ ಪಟ್ಟು ಹಿಡಿಯಿತು. ಈ ಬಗ್ಗೆ ಮಾಹಿತಿ ಅರಿತ ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಗೋಪಾಲ ನಾಯ್ಕ್ ರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

 

Related Posts

Leave a Reply

Your email address will not be published.