ಕಬಿನಿ ಅರಣ್ಯ ವಸತಿ ಹಾಗೂ ವಿಹಾರಧಾಮಕ್ಕೆ ಸಂಸದ ಶ್ರೀ ಬಿ.ವೈ.ರಾಘವೇಂದ್ರ ಭೇಟಿ: ಗಿಡ ನೆಟ್ಟು ಪರಿಸರ ಜಾಗೃತಿ

ಕಬಿನಿ ಅರಣ್ಯ ವಸತಿ ಹಾಗೂ ವಿಹಾರಧಾಮಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರು ಭೇಟಿ ನೀಡಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಪ್ರಕೃತಿ ಕೊಟ್ಟ ಸಂಪತ್ತು ಈ ಆಧುನಿಕ ಯುಗದಲ್ಲಿ ಕಾಡು ಉಳಿಸುವಂತಹದ್ದು ಸವಾಲಾಗಿದೆ. ಅರಣ್ಯವನ್ನು ಹತ್ತಿರದಿಂದ ನೋಡುವಂತಹ ಸೌಭಾಗ್ಯವನ್ನು ಅರಣ್ಯ ವಿಹಾರ ಸಂಸ್ಥೆ ನಮ್ಮೆಲ್ಲರಿಗೆ ನಮ್ಮ ಅಧ್ಯಕ್ಷರಾದ ಶ್ರೀ ಎಂ.ಅಪ್ಪಣ್ಣನವರ ನೇತೃತ್ವದಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.

ಸಂಸ್ಥೆಯ ಸಿಬ್ಬಂದಿಗಳ ಕಷ್ಟಗಳಿಗೆ ಸಹಕಾರಿಯಾಗಿ, ಸಿಬ್ಬಂದಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಸದ್ವಿನಿಯೋಗ ಮಾಡಿಕೊಂಡು ಸಂಸ್ಥೆಗೆ ಶಕ್ತಿ ತುಂಬುವ ಶ್ರೇಷ್ಠ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಯಶಸ್ವಿಯಾಗಿ ಕೊಂಡೊಯ್ದಿದ್ದಾರೆ ಎಂದು ಅಪ್ಪಣ್ಣನವರ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಅರಣ್ಯವಸತಿ ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಅಪ್ಪಣ್ಣನವರು ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರಿಗೆ ಸನ್ಮಾನಿಸಿದರು, ಜೆಎಲ್ಆರ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.