ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಲಬುರಗಿ ಪಾಲಿಕೆಯ ಮೇಯರ್ ಆಗ್ತಾರೆ: ಶಾಸಕ ಖಾದರ್ ವಿಶ್ವಾಸ
ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೇ ಮೇಯರ್ ಆಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಜನರು ನಮಗೆ ಮತ ನೀಡಿ ಸ್ಪಷ್ಟ ಬಹುಮತ ಕೊಟಿದ್ದಾರೆ. ಜೆಡಿಎಸ್ ತತ್ವ ಪ್ರಕಾರ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು. ಜೆಡಿಎಸ್ ಕಾಂಗ್ರೆಸ್ ಮಾಡಿದ ಉಪಕಾರ ಮರಿಯಲ್ಲ. ಜ್ಯಾತ್ಯಾತೀತ ನಿಲುವಿನ ಹಿನ್ನೆಲೆ ನಾವು ಅವ್ರಿಗೆ ಅವಕಾಶ ನೀಡಿದ್ದೇವೆ. ರಾಜ್ಯಸಭೆ ಚುನಾವಣೆಯಲ್ಲಿ ದೇವೆಗೌಡರಿಗೆ ಅವಕಾಶ ಕೊಟ್ಟಿದ್ದೇವೆ. ಇಲ್ಲಿ ಕಾಂಗ್ರೆಸ್ ಮಾಡಿದ ಉಪಕಾರ ಅವರು ಮರಿಯಲ್ಲ. ನಮ್ಮ ಉಪಕಾರ ಸ್ಮರಿಸಿ ನಮ್ಮ ಅಭ್ಯರ್ಥಿಗೆ ಅವಕಾಶ ನೀಡ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಖಾದರ್ ಹೇಳಿದರು.