ಕಾಪು: ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರಕ್ಕೆ ಬಿದ್ದು ಮೃತ್ಯು

ಮೀನುಗಾರಿಕೆಗೆ ತೆರಳಿದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಕಾಪು ಕಡಲ ಕಿನಾರೆಯಲ್ಲಿ ನಡೆದಿದೆ.ಮೃತ ವ್ಯಕ್ತಿ ಹೆಜಮಾಡಿ ಪಡುಕರೆ ಕೋಚ ಹೌಸ್ ನಿವಾಸಿ ಸಂತೋಷ್ (36) ವಿವಾಹಿತರಾಗಿದ್ದ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದು, ಸೈಕಲ್ ರಿಪೇರಿ ಹಾಗೂ ನೆಗರುಬಲೆ ಮೀನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಇವರ ಕುಟುಂಬ ಮನೆ ಯಜಮಾನನ್ನು ಕಳೆದುಕೊಂಡು ಆಧಾರ ಕಳೆದು ಕೊಂಡತ್ತಾಗಿದೆ. ಮುಂಜಾನೆ ಮನೆಬಿಟ್ಟ ಇವರು ಸೈಕಲ್ ರಿಪೇರಿ ನಡೆಸಿ ಬಳಿಕ ಮೀನುಗಾರಿಕೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ರಾತ್ರಿಯಾದರೂ ಮನೆಗೆ ಬಾರದಿರುವುದರಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಮರುದಿನ ಕಾಪು ಕಡಲ ಕಿನಾರೆಯಲ್ಲಿ ದೊರಕಿದ ಅಪರಿಚಿತ ಶವವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು, ಸಂಶಯಗೊಂಡ ಮನೆಮಂದಿ ಹೋಗಿ ನೋಡಿದಾಗ ಶವ ಮೀನುಗಾರಿಕೆಗೆ ಎಂದು ಮನೆ ಬಿಟ್ಟ ಸಂತೋಷ್ ನದ್ದಾಗಿತ್ತು. ಈ ಬಗ್ಗೆ ಮೃತನ ಸಹೋದರ ಹರೀಶ್ ಎಂಬವರು ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Posts

Leave a Reply

Your email address will not be published.