ಕುಕ್ಕೆಗೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕುಟುಂಬ ಭೇಟಿ

ಸುಬ್ರಹ್ಮಣ್ಯ: ರಾಜ್ಯ ಪೋಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.ಕುಟುಂಬದವರೊಂದಿಗೆ ಆಗಮಿಸಿದ ಪ್ರವೀಣ್ ಸೂದ್ ಅವರು ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಪೂಜೆ, ಅಭಿಷೇಕ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.


ಪ್ರವೀಣ್ ಸೂದ್ ಪತ್ನಿ, ಮಗಳು ಹಾಗೂ ಅಳಿಯ ಕ್ರಿಕೆಟ್ ಆಟಗಾರ ಮಾಯಾಂಕ್ ಅಗರ್ವಾಲ್ ಜೊತೆಗಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಇಒ ಡಾ. ನಿಂಗಯ್ಯ ಬರಮಾಡಿಕೊಂಡರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೆಡ, ಎಸ್ಪಿ ಋಷಿಕೇಶಿ ಸೋಣವಾನೆ, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಎಸೈ ಜಂಬೂರಾಜ್ ಮಹಾಜನ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.