ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ ಗುಮ್ಮಟನಗರಿ ಪೊಲೀಸರು

ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟ ಜಿಲ್ಲೆಯಲ್ಲಿ ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಏಳು ಜನ ಮನೆಗಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವಿಜಯಪುರ ಪೋಲಿಸ್ ವರಿಷ್ಠಾಧಿಕಾರಿ ಎಚ್. ಡಿ ಆನಂದಕುಮಾರ್ ತಿಳಿಸಿದ್ದಾರೆ.

ರಮೇಶ ಕಾಳೆ, ಸುರೇಶ ಚವ್ಹಾಣ, ಪರಶುರಾಮ ಕಾಳೆ, ಕಿರಣ ಬೇಡಕೇರ, ದೇವದಾಸ್ ಚವ್ಹಾಣ , ತನ್ವೀರ್ ಹೊನ್ನುಟಗಿ, ದಶರಥ ಹೊಸಮನಿ ಬಂಧಿತರು. ಇನ್ನೂ ಬಂಧಿತರಿಂದ 16ಲಕ್ಷ ಮೌಲ್ಯದ 360 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ, ಒಂದು ಬೊಲೇರೋ ವಾಹನವನ್ನು ವಶಕ್ಕೆ ಪಡೆದಿದ್ದಾರೆ, ಈ ಕುರಿತು ಹಲವು ಪೊಲೀಸ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇನ್ನೂ ಈ ಮನೆಗಳ್ಳತನ ಪ್ರಕರಣ ಭೇಧಿಸಿದ ಪೋಲಿಸ್ ತಂಡದ ಕಾರ್ಯ ವೈಖರಿಯನ್ನು ವಿಜಯಪುರ ಎಸ್ಪಿ ಎಚ್. ಡಿ ಆನಂದಕುಮಾರ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

Related Posts

Leave a Reply

Your email address will not be published.