ಕುತ್ತೆತ್ತೂರು ಗ್ರಾಮದಲ್ಲಿ ಕೃಷಿ ಮೀನುಗಾರ ದಿನಾಚರಣೆ

ಪೆರ್ಮುದೆ ಗ್ರಾಮ ಪಂಚಾಯತ್ ಯ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಪಡುಪದವು ಮಾಧವ ಭಟ್ ರವರ ಮನೆ ಬಳಿ ಕೃಷಿ ಮೀನು ಗಾರ ದಿನಾಚರಣೆ ಮತ್ತು ಮಾಹಿತಿ ಕಾರ್ಯಗಾರವನ್ನು ಮುಲ್ಕಿ ಮೂಡಬಿದ್ರಿ  ಶಾಸಕರಾದ  ಉಮನಾಥ್ ಕೋಟ್ಯಾನ್ ರವರು ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನ ಮಂತ್ರಿ ಯಾದ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯ ಕ್ರಮದಲ್ಲಿ ಜಲಸಂರಕ್ಷಣೆಗಾಗಿ ಜನರಿಗೆ ನೀಡಲಾದ ಮನವಿಗೆ ಪೇರಿತರಾಗಿ ಸುಮಾರು ೫೦ಲಕ್ಷಕ್ಕೂ ಮೇಲ್ಪಟ್ಟು ಖರ್ಚಮಾಡಿ ನಿರ್ಮಾಣದ ಕೆರೆ ಯಿಂದಾಗಿ ಸುತು ಮುತ್ತಲಿನ ಬಾವಿ ಗಳಿಗೆ ಅಂರ್ತಜಲ ಹೆಚ್ಚಿಸಲು ಅಲ್ಲದೇ ಹಲವಾರು ಜೀವರಾಶಿಗಳಿಗೆ ಕುಡಿಯುವ ನೀರು ವ್ಯವಸ್ಥೆ ಕಲ್ಪಸಿದಕ್ಕಾಗಿ ಮಾಧವ ಭಟ್ ರವರ ಕುಟುಂಬಕ್ಕೆ ಇದರ ಪುಣ್ಯ ಸಿಗುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

ಈ ಸಮಯದಲ್ಲಿ ಮೀನುಗಾರಿಕೆ ಇಲಾಖೆಯಿಂದ ಮಾಧವ ಭಟ್ ರನ್ನು ಸನ್ಮಾನಿಸಲಾಯಿತು ಹಾಗೂ ಕೃಷಿಕರಿಗೆ ಮೀನನ ಮರಿಯನ್ನು ವಿತರಿಸಲಾಯಿತು ಮತ್ತು ಮಾಧವ ಭಟ್ ರವರು ನಿರ್ಮಾಸಿದ ಕೆರೆಗೆ ಶಾಸಕರು ಮೀನನ ಮರಿಯನ್ನು ಬಿಡಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ಮುದೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಪ್ರಸಾದ್ ಆಂಚನ್ ರವರು ವಹಿಸಿದ್ದರು ಕೃಷಿ ವಿಜ್ಞಾನಿಯಾದ ಶ್ರೀ ಡಾ ಚೇತನ್ ರವರು ಮೀನು ಕೃಷಿ ಮಾಡುವ ಮಾಹಿತಿಯನ್ನು ನೀಡಿದರು ಶ್ರೀ ಮತಿ ಡಾ ಸುಶ್ಮೀತಾರಾವ್ ಮೀನುಗಾರಿಕೆ ಇಲಾಖೆಯಿಂದ ಮೀನು ಕೃಷಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಸಹಾಯಕ ನಿರ್ದೆಶಕರಾದ ದಿಲೀಪ್ ಕುಮಾರ್, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಶಿಕಲಾ ಶೆಟ್ಟಿ ಪಂಚಾಯತ್ ಸದಸ್ಯರಾದ ದಿವಾಕರ ಶೆಟ್ಟಿ ,ನವೀನ್ ಶೆಟ್ಟಿ ಮಂಗಳೂರು ನ್ಯಾಯ ಮಂಡಳಿ ಸದಸ್ಯರಾದ ಶ್ರೀ ಯುತ ಜಯಂತ್ ಸಾಲ್ಯಾನ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲಜಾ ಪಡುಪದವು ಯುವಕ ಮಂಡಲದ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಶೇಖರ ದೇವಾಡಿಗ ಸತೀಶ್ ಶೆಟ್ಟಿ ಹರೀಶ್ ದೇವಾಡಿಗ ಯೋಗಿಶ್ ಟಿ ದೇವಾಡಿಗ, ಮಧುಸೂದನ್ ರಾವ್ ,ಲೋಕನಾಥ್ ಭಂಡಾರಿ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.