ಕುಸಿದು ಬಿದ್ದ ಮಠದಬೆಟ್ಟು ಕಾಲು ಸೇತುವೆ: ಸಂಪರ್ಕ ಕಡಿತ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಇಂದ್ರಾಣಿ‌ ಹೊಳೆ ತುಂಬಿ ಹರಿಯುತ್ತಿದ್ದು‌,ಇದರಿಂದಾಗಿ ಶಿಥಿಲಗೊಂಡಿದ್ದ ಕಾಲು ಸೇತುವೆ ಒಂದು ಭಾಗ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ.


ಮಠದ ಬೆಟ್ಟು ,ಕೊಪ್ಪರ ತೋಟಕ್ಕೆ ಸಂಪರ್ಕಿಸುವ ಕಾಲು ಸಂಕವಾಗಿದ್ದು,ಹಲವು ಸಮಯಗಳಿಂದ‌ ಶಿಥಿಲವಸ್ಥೆಗೊಂಡಿತ್ತು.ಶನಿವಾರ ಮಧ್ಯಾಹ್ನ ಕಾಲು ಸೇತುವೆ ಯ ಒಂದು ಭಾಗ ಕುಸಿದು ಬಿದ್ದಿದ್ದು,ಸ್ಥಳೀಯ ಯುವಕರು ತಾತ್ಕಲಿಕವಾಗಿ ಮರದ ದಿಮ್ಮಿಗಳನ್ನು ಹಾಕಿ ಸರಿಪಡಿಸಲು ಹರಸಹಾಸ ಪಡುತ್ತಿದ್ದಾರೆ.  ಸ್ಥಳೀಯರು ಹಲವು ವರುಷಗಳಿಂದ ಇಲ್ಲೊಂದು ಸೇತುವೆ ನಿರ್ಮಿಸಿ ಕೊಡಲು ಮನವಿ ಸಲ್ಲಿಸಿದರೂ ಕೂಡ ಜನಪ್ರತಿನಿಧಿಗಳು ಸೇತುವೆ ನಿರ್ಮಾಣಕ್ಕೆ ಮುಂದಾಗಿರಲಿಲ್ಲ.ಇದೀಗ ಇದ್ದ ಕಾಲು ಸೇತುವೆ ಕೂಡ ಕುಸಿದು ಬಿದ್ದಿದ್ದು ,ಮಳೆಗಾಲದಲ್ಲಿ‌ ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ.

Related Posts

Leave a Reply

Your email address will not be published.