ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ. ರಾಜೀವ್ ಮೆಂಡನ್ ನಿಧನ

ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ. ರಾಜೀವ್ ಮೆಂಡನ್ ನಿಧನ ಮಂಗಳೂರು ತಾಲೂಕಿನ ತೊಕ್ಕೊಟ್ಟು ಭಟ್ನಗರ ನಿವಾಸಿ ಕುಸ್ತಿ ಶಿಕ್ಷಕ , ಸಮಾಜ ಸೇವಕ ಟಿ.ರಾಜೀವ್ ಮೆಂಡನ್ (87) ಅವರು ಶನಿವಾರ ನಿಧನರಾದರು .ಅವರು ಒಬ್ಬರು ಮಗಳು ಮತ್ತು ಇಬ್ಬರು ಮೊಮ್ಮಕಳನ್ನು ಅಗಲಿದ್ದಾರೆ.

ರಾಜೀವ್ ಮೆಂಡನ್ ಅವರು ತೊಕ್ಕೊಟ್ಟು ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಥಾಪಕರಲ್ಲೊಬ್ಬರು . ವ್ಯಾಯಾಮ ಶಾಲೆಯ ಮುಖ್ಯ ಶಿಕ್ಷಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರು ತೊಕ್ಕೊಟ್ಟು ಮೊಸರುಕುಡಿಕೆಯ ರೂವಾರಿಯಾಗಿದ್ದರು , ಮೆಂಡನ್ ಅವರು ಸಿ. ಪಿ.ಐ. ಎಂ. ಪಕ್ಷದ ಹಿರಿಯ ಮುಂದಾಳು, ನಾಲ್ಕು ಬಾರಿ ಸಿ.ಪಿ.ಎಂ. ಪಕ್ಷದ ಉಳ್ಳಾಲ ಟೌನ್ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ಚೆಂಬುಗುಡ್ಡೆಯ ಹಿಂದೂ ರುದ್ರಭೂಮಿಯ ಅಭಿವೃದ್ಧಿಯ ರೂವಾರಿ. ಇವರು ನೂರಾರು ಕುಸ್ತಿಪಟು ಗಳನ್ನು ತರಬೇತಿ ಗೊಳಿಸಿದ್ದಾರೆ, ಅಂತಾರಾಷ್ಟ್ರೀಯ ಮಟ್ಟದ ದೇಹದ್ರಡ್ಯಾಪಟುಗಳುನ್ನು ತರಬೇತಿಗೋಳಿಸಿದ್ದಾರೆ, ಅತ್ಯಂತ ಸರಳ ಸಜ್ಜನ ವ್ಯಕ್ತಿತ್ವದ . ಟಿ. ರಾಜೀವ ಮೆಂಡನ್ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Related Posts

Leave a Reply

Your email address will not be published.