ಕೂಡಲೇ ಬಿಸಿಯೂಟ ನೌಕರರ ಬಾಕಿ ವೇತನ ನೀಡಬೇಕು: ಮಾಲಿನಿ ಮೇಸ್ತಾ

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಿಸಿಯೂಟ ನೌಕರರ ಸಮ್ಮೇಳನವು ಜರಗಿತು. ಸಮ್ಮೇಳನವನ್ನು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾರವರು ಉದ್ಘಾಟಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ರಂಗಕ್ಕೆ ಆದ್ಯತೆ ನೀಡುತ್ತಿಲ್ಲ. ಖಾಸಗೀಕರಣವೇ ಸರ್ಕಾರದ ವೇದ ವಾಕ್ಯ ವಾಗಿದೆ. ಸರಕಾರದ ಕೋರೋನಾ ಲಾಕ್ ಡೌನ್ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಬಿಸಿಯೂಟ ತಯಾರಿಸಿ ಬಡಿಸುವ ಕಾರ್ಮಿಕರಿಗೆ ಬಾಕಿ ವೇತನ ನೀಡದೆ ಸತಾಯಿಸುತ್ತಿದೆ. ಸಂಘಧ ಪರಿಣಾಮಕಾರಿ ಹೋರಾಟ ದಿಂದಾಗಿ ಹತ್ತು ತಿಂಗಳ ವೇತನ ಪಡೆಯಲು ಸಾಧ್ಯವಾಗಿದೆ.ಬಾಕಿ ವೇತನ ಕಾರ್ಮಿಕರಿಗೆ ನೀಡುವುದರ ಬದಲು. ಮಕ್ಕಳ ಖಾತೆಗೆ ನೇರ ನಗದು ಮಾಡ ಹೊರಟಿದೆ. ಇದು ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರದಿಂದ ಕೂಡಿದೆ.

ಇದು ಖಂಡನೀಯ ಎಂದು ವಿವರಿಸಿದರು.ಇದರ ವಿರುದ್ದ ತೀವ್ರವಾದ ಹೋರಾಟವನ್ನು ಸಂಘಟಿಸಬೇಕಾಗಿದೆ ಎಂದು ಅವರು ಸಮ್ಮೇಳನದ ಉದ್ಘಾಟನಾ ಭಾಷಣವನ್ನು ಮಾಡಿದರು.ಅವರು ಮುಂದುವರಿದು ಜುಲೈ 25ರಿಂದ ಆಗಷ್ಟು 9ರತನಕ ನಡೆಯುವ ರೈತ, ಕಾರ್ಮಿಕ ಮತ್ತು ಕ್ರಷಿಕೂಲಿಕಾರರ ಪ್ರಚಾರಾಂದೋಲನ ಮತ್ತು ಪ್ರತಿಭಟನೆಯಲ್ಲಿ ಬಿಸಿಯೂಟ ನೌಕರರು ಭಿಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಸಿಐಟಿಯು ಜಿಲ್ಲಾ ಮುಂದಾಳುಗಳಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿವರು ಅತಿಥಿ ಭಾಷಣ ಮಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಜ ಮೂಡುಬಿದ್ರಿ ಯವರು ಚಟುವಟಿಕಾ ವರದಿಯನ್ನು ಮಂಡಿಸಿದರು. ಖಜಾಂಚಿ ಭವ್ಯರವರು ಲೆಕ್ಕಪತ್ರವನ್ನು ಮಂಡಿಸಿ ಚರ್ಚೆ ನಡೆದು ಅಂಗೀಕರಿಸಲಾಯಿತು. ಮುಂದಿನ ಚಟುವಟಿಕೆಗಾಗಿ ಗೌರವ ಅಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ,ಅಧ್ಯಕ್ಷರಾಗಿ ಭವ್ಯ, ಪ್ರಧಾನ ಕಾರ್ಯದರ್ಶಿ ಗಿರೀಜ ಮೂಡುಬದ್ರಿ, ಖಜಾಂಚಿಯಾಗಿ ರತ್ನಮಾಲ ರವರುಳ್ಳ 15 ಮಂದಿ ಪದಾಧಿಕಾರಿಗಳು ಮತ್ತು 15ಮಂದಿಯ ಜಿಲ್ಲಾ ಸಮಿತಿಯನ್ನು ರಚಿಸಲಾಯತು. ಪ್ರಾರಂಭ ಗಿರೀಜ ಮೂಡುಬಿದ್ರಿ ಯವರು ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ನೀಡಿದರು.ಜಿಲ್ಲಾ ಮುಂದಾಳು ಭವ್ಯರವರು ಕಾರ್ಯಕ್ರಮ ನಿರ್ವಹಿಸಿದರು.

 

Related Posts

Leave a Reply

Your email address will not be published.