ಕೃಷಿ ಚಟುವಟಿಕೆಗೆ ಕೈ ಬೀಜ ಹಾಕುವ ಸಂಪ್ರದಾಯ

ಮಂಗಳೂರು:ತುಳುನಾಡಿನಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಹಲವು ಸಂಪ್ರದಾಯಗಳಿದ್ದು,ಅದರಲ್ಲಿ ಕೆಲವೊಂದು ಸಂಪ್ರದಾಯಗಳು ಇಂದಿಗೂ ನಡೆದುಕೊಂಡು ಬರುತ್ತಿದೆ. ಅಂತಹ ಸಂಪ್ರದಾಯಗಳಲ್ಲಿ ಯುಗಾದಿ ಹಬ್ಬದ ಸಂದರ್ಭ ನಡೆಯುವಂತಹ ಕೈ ಬೀಜ (ಕೈ ಬಿತ್ತು) ಹಾಕುವ ಕ್ರಮವು ಒಂದಾಗಿದೆ. ಮಂಗಳೂರು ತಾಲೂಕಿನ ಏಳಿಂಜೆ ಕೆಳಗಿನ ಮನೆಯ ದಿ.ಬಾಡು ಮೂಲ್ಯ ಹಾಗೂ ದಿ.ಸುಬ್ಬಯ್ಯ ಮೂಲ್ಯ ಮನೆಯವರು ಇಂದಿಗೂ ಈ ಕೃಷಿ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಸುಮಾರು 100 ವರ್ಷಗಳಿಂದಲೂ ಹೆಚ್ಚು ಕಾಲದಿಂದ ಈ ಕೃಷಿ ಸಂಪ್ರದಾಯ ವನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪ್ರಥಮವಾಗಿ ಗದ್ದೆಯನ್ನು ಹದಮಾಡಿ ಗೊಬ್ಬರ ಹಾಕಿ ಬೀಜವನ್ನು ಬಿತ್ತಿ ಕುಂಟಾಳ ಗಿಡದ ಗೆಲ್ಲು ನೆಡಲಾಗುವುದು.ನಂತರ ಮನೆಯವರೆಲ್ಲರೂ ಸೇರಿ ಕುಟುಂಬದ ಹಾಗೂ ಊರಿನ ದೈವ ದೇವರುಗಳಿಗೆ ಪ್ರಾರ್ಥಿಸುವುದು ಸಂಪ್ರದಾಯವಾಗಿದೆ.
