ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆದ 99 ವರ್ಷದ ವೃದ್ಧೆ
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ 99 ವರ್ಷದ ವೃದ್ಧರೊಬ್ಬರು ಲಸಿಕೆಯನ್ನು ಪಡೆದಿದ್ದಾರೆ. ಉಳ್ಳಾಲದ ಸಂಕೋಳಿಗೆ ನಿವಾಸಿಯಾಗಿರುವ ಯು. ವಸಂತಿ ಅವರು ಲಸಿಕೆಯನ್ನು ಪಡೆದುಕೊಂಡವರು. ಲಸಿಕೆ ಪಡೆಯಲು ಭಯ ಪಡುತ್ತಿರುವ ಯುವಕ-ಯುವತಿಯರಿಗೆ ಈ ವೃದ್ಧೆಯೊಬ್ಬರು ಮಾದರಿಯಾಗಿದ್ದಾರೆ.