ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆ ವಿತರಣೆಯಲ್ಲಿ ವಿಫಲ: ಯು.ಟಿ.ಖಾದರ್ ಆರೋಪ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಸಿಕೆ ವಿತರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆರೋಪ ಮಾಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ದಿನ ಸುಮಾರು ಒಂದೂವರೆ ಲಕ್ಷ ಡೋಸ್ ಲಸಿಕೆ ಅಗತ್ಯ ಇದೆ.ಆದರೆ ಸರಬರಾಜಾಗುತ್ತಿರುವುದು ಒಂದು ವಾರಕ್ಕೆ 50 ಸಾವಿರ.ಇದರಿಂದಾಗಿ ಜನಸಾಮಾನ್ಯರು ಲಸಿಕೆಗಾಗಿ ಪರದಾಡುವಂತಾಗಿದೆ. ಸರಕಾರ ಜನಸಾಮಾನ್ಯರ ಈ ರೀತಿಯ ಅಗತ್ಯಗಳ ಬಗ್ಗೆ ,ಸಮಸ್ಯೆ ಚಿಂತನೆ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಆಗಿಲ್ಲ. ವಿದೇಶಕ್ಕೆ ಹೋಗುವ ವ್ಯಕ್ತಿ ಕುಟುಂಬ ಸಹಿತ ಹೋಗುವುದಕ್ಕೆ ಸಮಸ್ಯೆ ಯಾಗುತ್ತಿದೆ.ವಿದೇಶಕ್ಕೆ ತೆರಳುವ ವ್ಯಕ್ತಿ ಯ ಜೊತೆ ಆತನ ಕುಟುಂಬದ ವ್ಯಕ್ತಿ ಗಳಿಗೂ ಲಸಿಕೆ ಹಾಕಲು ಕ್ರಮ ಕೈ ಗೊಂಡಿಲ್ಲ.ಇದರಿಂದ ಆತ ತನ್ನ ಕುಟುಂಬ ವನ್ನು ಇಲ್ಲಿಯೇ ಬಿಟ್ಟು ತೆರಳಬೇಕಾದ ಸಮಸ್ಯೆ ಉಂಟಾಗಿದೆ.ಈ ಬಗ್ಗೆ ತಕ್ಷಣ ಸರಕಾರ ಗಮನ ಹರಿಸಿ ಕ್ರಮ ಕೈಗೊಳ್ಳ ಬೇಕು. ಎಂದು ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು,ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ ಶೆಟ್ಟಿ, ಹುಸೇನ್ ಕಲ್ಲಾಪು,ಜಬ್ಬಾರ್ ಮೊದಲಾದ ವರು ಉಪಸ್ಥಿತರಿದ್ದರು.