ಕೇರಳ ಕೋ-ಆಪರೇಟಿವ್ ಎಂಪ್ಲೋಯಿಸ್ ಕೌನ್ಸಿಲ್ ಮಂಜೇಶ್ವರ : ಬಸ್ಸು ತಂಗುದಾಣ ಕೊಡುಗೆ

ಮಂಜೇಶ್ವರ : ಕೇರಳ ಕೋ- ಆಪರೇಟಿವ್ ಎಂಪ್ಲೋಯೀಸ್ ಕೌನ್ಸಿಲ್ ಮಂಜೆಶ್ವರ ಯೂನಿಟ್ ಇವರ ವತಿಯಿಂದ ಕೊಡುಗೆಯಾಗಿ ಸುಮಾರು ಎರಡೂವರೆ ಲಕ್ಷ ರೂ. ವೆಚ್ಚದಲ್ಲಿ ಮಂಜೇಶ್ವರ ಒಳಪೇಟೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ಹೈಟೆಕ್ ಸೂಪರ್ ಸ್ಪೆಷಾಲಿಟಿ ಬಸ್ಸು ತಂಗುದಾಣ ಸೋಮವಾರದಂದು ಸಂಜೆ ಲೋಕಾರ್ಪಣೆಗೊಂಡಿತು.

 

ಜನನಿಬಿಡ ಪ್ರದೇಶವಾದ ಮಂಜೇಶ್ವರ ಒಳಪೇಟೆಯಲ್ಲಿ ಮೂಲಭೂತ ಸೌಕರ್ಯಗಳಲ್ಲೊಂದಾದ ಹೈಟೆಕ್ ಮಾದರಿಯ ಶೌಚಾಲಯಗಳನ್ನೊಳಗೊಂಡ ಬಸ್ಸು ತಂಗುದಾಣ ಲೋಕಾರ್ಪಣೆಗೊಂಡಿರುವುದು ಇಲ್ಲಿಯ ನಾಗರೀಕರೊಂದು ವರದಾನವಾಗಿದೆ. ಈ ಕಾರ್ಯಕ್ಕೆ ಮುತುವರ್ಜಿವಹಿಸಿ ಬಸ್ಸು ತಂಗುದಾಣವನ್ನು ಕಾರ್ಯರೂಪಕ್ಕೆ ತಂದ ಕೇರಳ ಕೋ- ಆಪರೇಟಿವ್ ಎಂಪ್ಲೋಯೀಸ್ ಕೌನ್ಸಿಲ್ ಮಂಜೆಶ್ವರ ಯೂನಿಟ್ ಸಂಘಟನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಶೆಗಳು ವ್ಯಕ್ತವಾಗುತ್ತಿವೆ.

ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ ವಿ ರಾಜನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಗ್ರಾ. ಪಂ. ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ಹೈಟೆಕ್ ತಂಗುದಾಣವನ್ನು ಲೋಕಾರ್ಪಣೆಗೈದರು.

ಈ ಸಂದರ್ಭ ಮೀಂಜ ಗ್ರಾ. ಪಂ. ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ, ಉಪಾಧ್ಯಕ್ಷ ಜಯರಾಂ ಬಲ್ಲಂಗುಡೇಲ್, ವರ್ಕಾಡಿ ಗ್ರಾ. ಪಂ. ಉಪಾಧ್ಯಕ್ಷ ಸಿದ್ದೀಖ್ ಪಾಡಿ, ವಾರ್ಡ್ ಸದಸ್ಯರಾದ ಸುಪ್ರೀಯ ಶೆಣೈ, ರೇಖಾ ಕೀರ್ತೇಶ್ವರ, ಮಂಜೇಶ್ವರ ಬ್ಲೋಕ್ ಪಂ. ಅಭಿವ್ರದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ, ನೇತಾರರಾದ ಟಿ ಕ್ರಷ್ಣ, ಗಣೇಶ್ ಕುಂಜತ್ತೂರು, ಮುಸ್ತಫ ಕಡಂಬಾರ್, ಇಬ್ರಾಹಿಂ ಐ ಆರ್ ಡಿಪಿ, ಶ್ರೀಧರ್ ಆರ್ ಕೆ, ಸಂಜೀವ ಶೆಟ್ಟಿ, ಹರೀಶ್ ಮಾಡ ಸೇರಿದಂತೆ ಹಲವರು ಉಪಸ್ಥರಿದ್ದರು

Related Posts

Leave a Reply

Your email address will not be published.