ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ವ್ಯಾಪಾರ ವಲಯದಲ್ಲಿ ಸರಕಾರದ ನಿಯಂತ್ರಣಗಳು ದಿನದಿಂದ ದಿನಕ್ಕೆ ಉಲ್ಬಣಗೊಳುತ್ತಿರುವ ಹಿನ್ನೆಲೆಯಲ್ಲಿ ಸರಕಾರ ನೀತಿಯನ್ನು ಖಂಡಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಮಟ್ಟದಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರದ ಹೊಸಂಗಡಿಯಲ್ಲೂ ಮಂಜೇಶ್ವರ ವ್ಯಾಪಾರ ಯೂನಿಟ್ ನ ನೇತೃತ್ವದಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಒಂದು ಗಂಟೆಗಳ ಕಾಲ ನಿಂತುಕೊಂಡು ಪ್ರತಿಭಟನೆಯನ್ನು ನಡೆಸಿ ಗಮನ ಸೆಳೆದರು.

ಕೆಲವೊಂದು ಅಂಗಡಿಗಳನ್ನು ತೆರೆಯುವುದಕ್ಕೆ ಸರಕಾರ ವಿರೋಧ ವ್ಯಕ್ಳ್ತಪಡಿಸಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಸಂಪೂರ್ಣವಾಗಿ ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.. ಸಂಘಟನೆಯ ಕೋಶಾಧಿಕಾರಿ ದಯಾನಂದ ಬಂಗೇರ ರವರ ಅಧ್ಯಕ್ಷತೆಯಲ್ಲಿ ಒಂದು ತಾಸುಗಳ ತನಕ ನಿಂತು ಕೊಂಡು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಂಜೇಶ್ವರ ಯೂನಿಟ್ ಅಧ್ಯಕ್ಷ ಬಶೀರ್ ಕನಿಲ, ಪ್ರಮುಖರಾದ ಹಸೈನಾರ್ ಸೇವನ್ ಸ್ಟಾರ್, ಅಲಿಕುಟ್ಟಿ ನ್ಯಾಷನಲ್, ಇಬ್ರಾಹಿಂ ಬಟರ್ ಫ್ಲೈ, ವ್ಯಾಪಾರಿ ಸಂಘಟನೆಯ ನೇತಾರರು ಹಾಗೂ ಕಾರ್ಯಕರ್ತರುಗಳು ಪಾಲ್ಗೊಂಡರು.

 

Related Posts

Leave a Reply

Your email address will not be published.