ಕೊಟ್ಟಾರ ಚೌಕಿಯಲ್ಲಿ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭ

ಹೊಂಡಾ ಮೋಟಾರ್‍ಸ್‌ನವರ ಅತ್ಯುನ್ನತ ಶ್ರೇಣಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭಗೊಂಡಿತು. ನಗರದ ಕೊಟ್ಟಾರ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು.

ದ್ವಿಚಕ್ರ ವಾಹನ ಪ್ರೀಯರ ನೆಚ್ಚಿನ ಶೋರೋಂ ಆಗಿರುವ ಹೊಂಡಾ ಮೊಟಾರ್‍ಸ್‌ನವರ ಹೊಂಡಾ ಬಿಗ್ ವಿಂಗ್ ನಗರದ ಕೊಟ್ಟಾರ್ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ಹೊಂಡಾ ಬಿಗ್ ವಿಂಗ್ ಮಳಿಗೆಯನ್ನು ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸಚಿನ್ ಶೆಟ್ಟಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.  

ಆನಂತರ ಅತಿಥಿ ಗಣ್ಯರು ನೂತನ ಹೊಂಡಾ ಬೈಕ್‌ನನ್ನು ಅನಾವರಣಗೊಳಿಸಿದರು. ಆನಂತರ ಸರಳಾ ಕಾಂಚನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆನಂತರ ಸರ್ವೀಸ್ ಸ್ಟೇಷನ್‌ನ್ನು ಹೋಂಡಾ ಮ್ಯಾಟ್ರಿಕ್ಸ್ ನ ಪ್ರತಿನಿಧಿ ವೆಂಕಟರಮಣ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮಾತನಾಡಿ, ಈ ಮಳಿಗೆ ಯುವಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಲಿ ಎಂದು ಹೇಳಿದರು. ಆನಂತರ ಹಾಡು ಹಾಡುವ ಮೂಲಕ ನೆರೆದಿದ್ದವರನ್ನು ಮನರಂಜಿಸಿದರು.

ಚಿತ್ರನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ಹೊಂಡಾ ಮೋಟಾರ್ಸ್ನವರ ಉನ್ನತ ಶ್ರೇಣಿಯ ಬೈಕ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಕರಾವಳಿಯಾದ್ಯಂತ ಮನೆಮಾತಾಗಲಿ ಎಂದು ಹೇಳಿದರು.

ಶಟರ್ ಬಾಕ್ಸ್ ಫೀಲ್ಸ್ ನ ಸಚಿನ್ ಶೆಟ್ಟಿ ಮಾತನಾಡಿ ನೂತನ ಶೋರೂಂ ಆರಂಭಿಸಿರುವುದು ಶ್ಲಾಘನೀಯ ಎಂದರು ಕಾಂಚನ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಪ್ರಸಾದ್ ರಾಜ್ ಕಾಂಚನ್ ಸ್ವಾಗತಿಸಿ ಮಾತನಾಡಿ, ಈ ಮಳಿಗೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಥಮವಾಗಿದ್ದು ಹೋಂಡಾ ಮೋಟಾರ್ಸ್ ರವರ ಉನ್ನತ ಶ್ರೇಣಿಯ ಬೈಕ್ ಗಳನ್ನು ಮಾರಾಟ ಮಾಡಲಾಗುತ್ತದೆ. ಈ ಮೋಟಾರ್ ಬೈಕ್ ಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗರ ತಯಾರಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರಳಾ ಕಾಂಚನ್, ವೀಕೆಂಡ್ ಆನ್ ವೀಲ್ಸ್ ನ ಗಿರೀಶ್ ಶೆಟ್ಟಿ ಮಾಲತಿ ಮುಲ್ಕಿ, ಕಾಂಚನಾ ಮೋಟಾರ್ಸ್ ನ ನಿರ್ದೇಶಕಿ ಸುಕನ್ಯಾ ಕಾಂಚನ್, ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್ ಉಪಸ್ಥಿತರಿದ್ದರು. ಅರ್ ಜೆ. ಎರೋಲ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನು ಮನರಂಜಿಸಿತು.ಕಪ್ಪು ಬಿಳಿ ಏಕವರ್ಣ ಥೀಮ್ ನಿಂದ ಅಲಂಕರಿಸಲ್ಪಟ್ಟ ಬಿಗ್ ವಿಂಗ್ ವಾಹನಗಳನ್ನು ಸಂಪೂರ್ಣ ವೈಭವದಲ್ಲಿ ಪ್ರದರ್ಶಿಸುತ್ತಾರೆ. ಗ್ರಾಹಕರ ಉತ್ಪನ್ನ ಅಥವಾ ಪರಿಕರಗಳ ಬಗೆಗಿನ ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಲು ಬಿಗ್ ವಿಂಗ್‌ನಲ್ಲಿ ಉತ್ತಮ ತರಬೇತಿ ಪಡೆದ ವೃತ್ತಿಪರರು ಇರುತ್ತಾರೆ.

Related Posts

Leave a Reply

Your email address will not be published.