ಕೋಡಿಕಲ್ ನಾಗನಕಟ್ಟೆಗೆ ಹಾನಿ ಪ್ರಕರಣ: ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಸಿಪಿಐಎಂನಿಂದ ಮನವಿ

ಕೋಡಿಕಲ್ ನಾಗನ ಕಟ್ಟೆಗೆ ಹಾನಿ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ, ಕೋಮು ಸೌಹಾರ್ದತೆ ಕದಡಲು ಅವಕಾಶ ನೀಡದಂತೆ ಒತ್ತಾಯಿಸಿ ಸಿಪಿಐಎಂ ಪಕ್ಷದ ನಿಯೋಗ ಉರ್ವ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ವೇಳೆ ನಿಯೋಗದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಸಿಪಿಐಎಂ ಮಂಗಳೂರೂ ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್,ಉತ್ತರ ಕಾರ್ಯದರ್ಶಿ ಬಶೀರ್ ಪಂಜಿಮೊಗರು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರಾದ ಯೋಗೀಶ್ ಜಪ್ಪಿನಮೊಗರು,ನಗರ ಸಮಿತಿ ಮುಖಂಡರಾದ ಶಶಿಧರ್ ಶಕ್ತಿನಗರ, ಪ್ರಶಾಂತ್ ಉರ್ವಸ್ಟೋರ್, ಪ್ರದೀಪ್ ಉರ್ವಸ್ಟೋರ್,ನವೀನ್ ಕೊಂಚಾಡಿ, ಮನೋಜ್ ಉರ್ವಸ್ಟೋರ್,ಅಶೋಕ್ ಶ್ರೀಯಾನ್ , ಉರ್ವಸ್ಟೋರ್ ಸಿಪಿಐಎಂ ಪಕ್ಷದ ಕಾರ್ಯದರ್ಶಿ ಇಕ್ಬಾಲ್ ಉರ್ವಸ್ಟೋರ್, ಕೃಷ್ಣ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.