ಗಂಗೊಳ್ಳಿ : ಅಕ್ರಮ ಗೋಸಾಗಾಟ ಓಮ್ನಿ ಸಹಿತ ನಾಲ್ವರ ಬಂಧನ
ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟ ನಡೆಯುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಈಸುಬು ಬ್ಯಾರಿ, ಮಹಮ್ಮದ್ ಮಸೂದ್, ಅಬ್ದುಲ್ ಸಮದ್ ಮತ್ತು ಭದ್ರ ಪೂಜಾರಿ ಬಂಧಿತರು. ಮೋವಾಡಿ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗುತ್ತಿದ್ದಾಗ ಗಂಗೊಳ್ಳಿ ಠಾಣಾ ಪಿ. ಎಸ್. ಐ ನಂಜಾನಾಯ್ಕ ತಂಡ ಕಾರ್ಯಾಚರಣೆ ನಡೆಸಿ ಅಪಾರಾದಿತರನ್ನು ಬಂಧಿಸಿ ಕರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿಯನ್ನು ವಶಕ್ಕೆ ಪಡಿಸಿಕೊಂಡು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಠಾಣೆ ಸಿಬ್ಬಂದಿಗಳಾದ ಚಂದ್ರಶೇಖರ,ರವಿ ದೇವಾಡಿಗ ಮತ್ತು ಸಂಪತ್ ಕುಮಾರ್ ಭಾಗವಹಿಸಿದ್ದರು.