ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ ಸಂಸ್ಥೆಯಿಂದ ವಿಶ್ವ ಔಷಧ ತಜ್ಞರ ದಿನಾಚರಣೆ
ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ ಸಂಸ್ಥೆಯ ವತಿಯಿಂದ ವಿಶ್ವ ಔಷಧ ತಜ್ಞರ ದಿನಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಉಡುಪಿಯ ರಸಾಯನಶಾಸ್ತ್ರಜ್ಞ ಮತ್ತು ಔಷಧ ತಜ್ಞರ ಸಂಘದ ಅಧ್ಯಕ್ಷರಾದ ವಿ.ಜಿ. ಶೆಟ್ಟಿ ಅವರು 2012ರಿಂದ ವಿಶ್ವ ಔಷಧ ತಜ್ಞರ ದಿನವನ್ನಾಗಿ ಆಚರಿಸಲಾಗುತ್ತಿದೆ. ಉಡುಪಿಯ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಸಂಸ್ಥೆಯ ವತಿಯಿಂದ ಆಚರಿಸಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಔಷಧ ತಜ್ಞರ ಪಾತ್ರ ಬಹು ಮುಖ್ಯವಾಗಿರುತ್ತದೆ. ಆರೋಗ್ಯಕರ ಜೀವನವು ಒಂದು ಯೋಗಕ್ಷೇಮವಾಗಿದೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಕಂಕನಾಡಿಯ ಗಣೇಶ್ ಮೆಡಿಕಲ್ಸ್ನ ಸ್ಥಾಪಕರಾದ ಹಾಗೂ ಮಂಗಳೂರಿನ ಹಿರಿಯ ಔಷಧ ತಜ್ಞರಾದ ಸದಾನಂದ ಶೆಟ್ಟಿ ಅವರನ್ನು ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಮಂಗಳೂರು ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿಯ ಹಿರಿಯ ಪಾರ್ಮಾಸಿಸ್ಟ್ ಯು.ಕೆ. ಗೋಪಾಲಕೃಷ್ಣ ರಾವ್, ರಘುರಾಮ್ ಭಟ್, ರಮೇಶ್ ನಾಯಕ್, ಸುಕನ್ಯಾ ರಾಜೇಂದ್ರ ಪ್ರಸಾದ್, ಸಂಜೀವ್ ಪಾಟೀಲ್, ರಾಘವೇಂದ್ರ ಕಾಮತ್ ಅವರನ್ನು ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ ಸಂಸ್ಥೆ, ಉಡುಪಿ ಲಯನ್ಸ್ ಕ್ಲಬ್, ಇಂಡಿಯನ್ ಸೀನಿಯರ್ ಚೇಂಬರ್ಸ್ ಉಡುಪಿ ಟೆಂಪಲ್ ಸಿಟಿ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸುಕುಮಾರ್, ಇಂಡಿಯನ್ ಸೀನಿಯರ್ ಚೇಂಬರ್ಸ್ ಉಡುಪಿ ಟೆಂಪಲ್ ಸಿಟಿಯ ಅಧ್ಯಕ್ಷರಾದ ವಿಷ್ಣುದಾಸ್ ಪಾಟೀಲ್, ಉಡುಪಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿರಾಜ್, ಗಿರಿಜಾ ಹೆಲ್ತ್ಕೇರ್ ಸರ್ಜಿಕಲ್ನ ಪಾಲುದಾರ ಗಿರೀಶ್ ಕುಮಾರ್, ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.