ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಸಂಸ್ಥೆ : ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೊಲಿಕ್ಲಿನಿಕ್ ಉದ್ಘಾಟನೆ

ಕುಂದಾಪುರ: ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಗಿರಿಜಾ ಹೆಲ್ತ್ ಕೇರ್‍ನ ಮತ್ತೊಂದು ಮಳಿಗೆ ಕುಂದಾಪುರದಲ್ಲಿ ಉದ್ಘಾಟನೆಗೊಂಡಿತು. ಉಡುಪಿಯ ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ ವತಿಯಿಂದ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೆÇಲಿಕ್ಲಿನಿಕ್ ಕುಂದಾಪುರ ಮುಖ್ಯರಸ್ತೆಯ ಪಾರಿಜಾತ ಹೊಟೇಲಿನ ಎದುರಿನ ಅಥರ್ವ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.girija health care kundapura

ಹೆಲ್ತ್ ಕೇರ್‍ನ್ನು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಕುಂದಾಪುರ ಬೆಳೆಯುತ್ತಿರುವ ನಗರ. ಕೇವಲ ಕುಂದಾಪುರ ಮತ್ತು ಬೈಂದೂರು ತಾಲೂಕು ಮಾತ್ರವಲ್ಲದೇ ಕುಂದಾಪುರವನ್ನು ಕೇಂದ್ರವಾಗಿಟ್ಟುಕೊಂಡು ಭಟ್ಕಳ, ಹೊಸನಗರ, ತೀರ್ಥಹಳ್ಳಿಯವರೆಗಿನ ಎಲ್ಲಾ ಪ್ರದೇಶದ ಜನರು ಎಲ್ಲಾ ರೀತಿಯ ವೈದ್ಯಕೀಯ ನೆರವಿಗೆ ಕುಂದಾಪುರಕ್ಕೆ ಬರುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಬೇಕಾಗಿರುವ ಅಗತ್ಯವಾದ ವೈದ್ಯಕೀಯ ಸಲಕರಣೆಗಳನ್ನು ನೇರವಾಗಿ ಮತ್ತು ಪ್ರಾಮಾಣಿಕವಾಗಿ ಸಲ್ಲಿಸುವ ವ್ಯವಸ್ಥೆಯನ್ನು ಗಿರಿಜಾ girija health care kundapuraಹೆಲ್ತ್ ಕೇರ್ ಸಂಸ್ಥೆ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿಯ ಎವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ವೈದ್ಯ ಡಾ.ಪಿ.ವಿ ಭಂಡಾರಿ, ಕುಂದಾಪುರದಲ್ಲಿ ಇಂತಹ ಶೋರೂಂ ಅತ್ಯಂತ ಅವಶ್ಯಕವಾಗಿತ್ತು. ವಯೋವೃದ್ದರಿಗೆ, ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಗಳು ಉಂಟಾದಾಗ ಅವರಿಗೆ ಬೇಕಾಗುವ ಹಲವು ಸಲಕರಣೆಗಳನ್ನು ಒಂದೇ ಸೂರಿನಡಿಯಲ್ಲಿ ಕಲ್ಪಿಸಿಕೊಟ್ಟಿದ್ದಾರೆ. ಖಂಡಿತವಾಗಿಯೂ ಜನಸ್ನೇಹಿಯಾದ ದರವನ್ನಿಟ್ಟು ಜನರಿಗೆ ಸಹಾಯವಾಗುವ ರೀತಿಯಲ್ಲಿ ವ್ಯವಹಾರವನ್ನು ಮುನ್ನಡೆಸುತ್ತಾರೆಂಬ ವಿಶ್ವಾಸವಿದೆ. ವೆಟರ್ನರಿ ಉತ್ಪನ್ನ, ಪ್ರಾಣಿಗಳ ಆಹಾರ, ಪಿಸಿಯೋ ಥೆರಫಿಗೆ ಸಂಬಂಧಪಟ್ಟ ಸಲಕರಣೆಗಳು ಸೇರಿದಂತೆ ನಾನಾ ನಮೂನೆಯ ವಸ್ತುಗಳನ್ನು ಹೊಂದಿರುವ ಒಂದು ಅತ್ಯುತ್ತಮ ಮಳಿಗೆ ಇದಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸವಿದೆ ಎಂದು ನುಡಿದರು.girija health care kundapura

ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗಿಸ್ಟ್ ಅಸೋಸಿಯೇಷನ್ ಉಪಾಧ್ಯಕ್ಷ ಸದಾಶಿವ ರಾವ್ ಮೆಡಿಕಲ್ ಪಾಲಿಕ್ಲಿನಿಕ್ ಅನ್ನು ಉದ್ಘಾಟಿಸಿದರು.

ಗಿರಿಜಾ ಗ್ರೂಪ್ ಪಾಲುದಾರ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದ ಗಿರಿಜಾ ಎಂಟರ್ಪ್ರೈಸಸ್ ಎಂಬ ಹೋಲ್ಸೇಲ್ ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದು, ನಂತರ 2 ವರ್ಷಗಳಿಂದ ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ತೆರೆಯಲಾಗಿದೆ. ಇದರಲ್ಲಿ ಮೆಡಿಷನ್ ಮತ್ತು ಸರ್ಜಿಕಲ್ಸ್ ಎರಡನ್ನು ಹೋಲ್ಸೇಲ್ ಆಗಿ ನೀಡುವಂತಹದನ್ನು ಮಾಡಿದ್ದೇವೆ. ಈಗಾಗಲೇ ಉಡುಪಿ ಹಾಗೂ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯಲಾಗಿದ್ದು, ಇದು ಮೂರನೇ ಶಾಖೆಯಾಗಿದೆ ಎಂದರು.girija health care kundapura

ಮಕ್ಕಳ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮಕ್ಕೂ ಮೊದಲು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಚೇರ್ಮನ್ ಜಯಕರ್ ಶೆಟ್ಟಿ, ಕಟ್ಟಡ ಮಾಲಕ ಗಣೇಶ್ ನಾಯಕ್, ಕುಂದಾಪುರ ಸಿಟಿ ಜೆಸಿಯ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕುಂದಾಪುರ ಕುಂದಗನ್ನಡ ರಾಯಭಾರಿ ಮನು ಹಂದಾಡಿ ಉಪಸ್ಥಿತರಿದ್ದರು.

ಸಂದೇಶ್ ಶೆಟ್ಟಿ ಸಲ್ವಾಡಿ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.

 

Related Posts

Leave a Reply

Your email address will not be published.