ಗೋವು ಕಳ್ಳತನದ ವಿರುದ್ಧ ಹಿಂಜಾವೇ, ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಗೋವು ಕಳ್ಳತನದ ವಿರುದ್ಧ ಹಿಂದು ಜಾಗರಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು.

ಹಿಂದುಗಳ ಧಾರ್ಮಿಕ ನಂಬಿಕೆಗಳ ಪ್ರಕಾರ ಗೋವು ಆರಾಧ್ಯ ದೇವತೆ ಯಾಗಿದ್ದು ಗೋಮಾತೆ ಎಂದು ಕರೆಯಲ್ಪಡುತ್ತದೆ, ಅಂತಹ ಗೋಮಾತೆಯನ್ನು ಹಿಂಸಾತ್ಮಕವಾಗಿ ಕೊಂದು ಅದನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂದುಗಳ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಹಲವಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿಯವರು ಗೋಮಾತೆಯು ಹಿಂದುಗಳ ಆರಾಧ್ಯ ದೇವರು, ಗೋಮಾತೆಯನ್ನು ಪೂಜಿಸಿದ ನಂತರವೇ ಮುಂದಿನ ಕಾರ್ಯಗಳನ್ನು ಮಾಡುವಂತಹದ್ದು ಹಿಂದುಗಳ ರೂಡಿಕೆ, ಗೋವು ಕಣ್ಣಿಗೆ ಕಾಣುವ ದೇವರು, ಅಂತಹ ಗೋಮಾತೆಯನ್ನು ಕಳ್ಳತನ ಮಾಡಿ ಹಿಂಸಾತ್ಮಕವಾಗಿ ಕೊಲ್ಲುವುದು ವಿಷಾದನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಮುಖಂಡರು, ಮಹಾಶಕ್ತಿ ಕೇಂದ್ರದ ಮುಖಂಡರು ಹಾಗೂ ವಿವಿಧ ಹಿಂದು ಸಂಘಟನೆಗಳ ಮುಖಂಡರು ಮತ್ತು ಹಿಂದು ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.