ಗ್ಯಾಸ್ ಬೆಲೆ 354 ರೂ. ಇದ್ದಾಗ ಬೀದಿಗಿಳಿದವರು ಈಗ ಎಲ್ಲಿದ್ದಾರೆ: ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನೆ
ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕೊರೋನಾದಿಂದ ಮೃತಪಡಲ್ಲ, ಬಡತನದಿಂದ ಮೃತಪಡುವ ಸಾಧ್ಯತೆ ಇದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ರು.
ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಚ್ಚೇದಿನ್ ತರುವುದಾಗಿ ಹೇಳಿ ಕಾಂಗ್ರೆಸ್ನ ದೋಷಗಳನ್ನು ಹೇಳಿ ಭಾವನಾತ್ಮಕವಾಗಿ ಜನರನ್ನು ಸೆಳೆದು ಮತಗಳಿಸಿ ಉನ್ನತ ಅಧಿಕಾರಕ್ಕೇರಿದ್ದರೂ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದರು.2014ರಲ್ಲಿ ಕಚ್ಚಾ ತೈಲ ಬೆಲೆ 112 ಡಾಲರ್ ಆಗಿದ್ದಾಗ ಡೀಸೆಲ್ ಬೆಲೆ 61 ರೂ. ಹಾಗೂ ಪೆಟ್ರೋಲ್ ಬೆಲೆ 67 ರೂ.ಗಲಾಗಿತ್ತು. 2021ರಲ್ಲಿ ಕಚ್ಚಾ ತೈಲ ಬೆಲೆ 69 ಡಾಲರ್ಗಳಿಗೆ ಇಳಿದಿದೆ. ಡೀಸೆಲ್ ಬೆಲೆ 94 ರೂ. ಪೆಟ್ರೋಲ್ ಬೆಲೆ 104 ರೂ.ಗಳಾಗಿವೆ. ಕಚ್ಚಾತೈಲ ಬೆಲೆ ದುಪ್ಪಟ್ಟು ಇಳಿಕೆಯಾಗಿದ್ದರೂ ಕೇಂದ್ರ ಸರಕಾರ ಸಬೂಬು ಹೇಳಿ ಜನರನ್ನು ವಂಚಿಸುತ್ತಿದೆ ಎಂದು ಮಮತಾ ಗಟ್ಟಿ ಆರೋಪಿಸಿದರು.
ಇನ್ನು ಯುಪಿಎ ಆಡಳಿತಾವಧಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 354ರೂ.ಗಳಿದ್ದಾಗ ಬೀದಿಗಿಳಿದು ಹೋರಾಟ ಮಾಡಿದ್ದ, ಪ್ರಸಕ್ತ ಕೇಂದ್ರ ಸಚಿವರಾಗಿರುವ ನಿರ್ಮಲಾ ಸೀತಾರಾಮನ್, ಸ್ಮತಿ ಇರಾನಿ, ಶೋಭಾ ಕರಂದ್ಲಾಜೆಯವರು ಇದೀಗ ಗ್ಯಾಸ್ ಬೆಲೆ 900 ರೂ.ಗಳಿದ್ದು ತಾವು ಉನ್ನತ ಸ್ಥಾನದಲ್ಲಿದ್ದರೂ ಯಾಕೆ ಮಾತನಾಡುತ್ತಿಲ್ಲ. ಅಚ್ಚೇದಿನ್ ತರುವುದಾಗಿ ಹೇಳಿ ಕಾಂಗ್ರೆಸ್ನ ದೋಷಗಳನ್ನು ಹೇಳಿ ಭಾವನಾತ್ಮಕವಾಗಿ ಜನರನ್ನು ಸೆಳೆದು ಮತಗಳಿಸಿ ಉನ್ನತ ಅಧಿಕಾರಕ್ಕೇರಿದ್ದರೂ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದರು.ಸುದ್ದಿ ಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಸಬಿತಾ ಮಿಸ್ಕಿತ್, ಶೋಭಾ ಕೇಶವ್, ತೆರೆಸಾ, ಚಂದ್ರಕಲಾ, ಗೀತಾ ಅತ್ತಾವರ ಉಪಸ್ಥಿತರಿದ್ದರು.