ಚುನಾವಣೆ ವೇಳೆ ಬಿಜೆಪಿ ನನ್ನ ಮೇಲೆ ಅಪಪ್ರಚಾರ ಮಾಡಿದೆ : ಮಾಜಿ ಸಚಿವ ರಮಾನಾಥ್ ರೈ ಆರೋಪ
ಚುನಾವಣೆಯ ವೇಳೆ ಬಿಜೆಪಿ ನನ್ನ ಮೇಲೆ ಅಪಪ್ರಚಾರ ಮಾಡಿದೆ. ಎರಡು ಭಾರಿ ಚುನಾವಣೆ ವೇಳೆ ಅಪಪ್ರಚಾರ ಮಾಡಿದ್ದಾರೆ. ಎರಡು ಹತ್ಯೆ ಬಗ್ಗೆ ನನ್ನ ಮೇಲೆ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸೋಲಿಸಲು ಹತ್ಯೆಯ ಬಗ್ಗೆ ಅಪಪ್ರಚಾರ ಮಾಡಿದ್ರುಒಂದು ವೇಳೆ ನಾನು ಹತ್ಯೆ ಮಾಡಿದ್ರೆ ಜೈಲ್ನಲ್ಲಿ ಇರ್ತಿದ್ದೆ. ನಮ್ಮ ದೇಶದ ಕಾನೂನು ಅಷ್ಟು ಬಲಿಷ್ಠ ಆಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಂಗಳೂರಿನ ಸಕ್ರ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎರಡು ಹತ್ಯೆ ಮಾಡಿದ್ರೆ ಹೊರಗೆ ತಿರುಗಾಡಲು ಸಾಧ್ಯವೇ. ಅಪಪ್ರಚಾರದ ಮೂಲಕ ಸೋಲಿಸಲು ಕುತಂತ್ರ ನಡೆಸಿದರು ಎಂದು ಆರೋಪಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಜಯಶೀಲ ಅಡ್ಯಂತ್ಯಾಯ, ಪದ್ಮನಾಭ್, ಆಶೋಕ್, ಹರಿನಾಥ್ ಮತ್ತಿತರರು ಉಪಸ್ಥಿತರಿದ್ದರು.