ಚೌತಿ ಯ ಗಣಪನನ್ನೂ ಕಾಡಿದ ಜಿ ಎಸ್‍ ಟಿ : ತತ್ತರಿಸಿದ ಗಣಪತಿ ವಿಗ್ರಹ ತಯಾರಾಕರು

ದೇಶೆದೆಲ್ಲೆಡೆ ಚೌತಿ ಹಬ್ಬದ ವಿಗ್ರಹ ತಯಾರಿ ಈಗಾಗಲೇ ಆರಂಭಗೊಂಡಿದೆ. ಈ ನಡುವೆ ಗಣೇಶನ ಮೂರ್ತಿಗೆ ಫೈನಲ್ ಟಚ್ ಕೊಡಲಾಗುತ್ತಿದೆ. ಇನ್ನು ಮಂಗಳೂರಿನಲ್ಲೂ ಗಣೇಶ ಹಬ್ಬದ ಪ್ರಯುಕ್ತ ಪೂರ್ವತಯಾರಿ ಜೋರಾಗಿದ್ದು, ಕಳೆದ 92 ವರ್ಷದಿಂದ ಪಾರಂಪರಿಕವಾಗಿ ಗಣೇಶ ವಿಗ್ರಹ ತಯಾರಿ ಮಾಡುತ್ತಿರೋ ಸಹೋದರರ ಕೆಲಸ ಎಲ್ಲರ ಗಮನಸೆಳೆದಿದೆ. ಹಾಗಾದ್ರೆ ಇದು ಎಲ್ಲಿ ಅಂತೀರಾ ಇಲ್ಲಿದೆ. ಸ್ಪೆಷಲ್ ರಿಪೋರ್ಟ್…

ಹೌದು ಮಂಗಳೂರಿನ ಮಣ್ಣಗುಡ್ಡೆಯ ರಾವ್ ಪ್ಯಾಮಿಲಿ, ಕಳೆದ 92 ವರ್ಷದಿಂದ, ಪ್ರತಿವರ್ಷ ಚೌತಿಗೆ ತಪ್ಪದೆ ಗಣೇಶನ ಮೂರ್ತಿ ತಯಾರಿ ನಡೆಯುತ್ತಿದೆ. ಈ ಬಾರಿಯೂ ನಿವಾಸದಲ್ಲಿ 240 ಕ್ಕೂ ಅಧಿಕ ಮೂರ್ತಿಗಳು ತಯಾರು ಆಗ್ತಾ ಇದೆ. ಅಂದ ಹಾಗೆ ಮಣ್ಣುಗುಡೆಯ ಹರಿದಾಸ್ ಲೈನ್‍ನಲ್ಲಿರುವ ದಿವಂಗತ ಮೋಹನ್ ರಾವ್ ಅವರ ಕುಟುಂಬಸ್ಥರು ಕಲಾವಿದರು ಆಗಿದ್ದು, ನಗರದ ಜನತೆಗೆ ಚಿರಪರಿಚತರಾಗಿದ್ದಾರೆ. ಕಳೆದ 92ವರ್ಷಗಳಿಂದ ಪಾರಂಪಾರಿಕ ಮಣ್ಣಿನ ಮೂರ್ತಿಗಳನ್ನ ತಯಾರು ಮಾಡಲಾಗುತ್ತಿದೆ. ನಾಲ್ಕು ಮಕ್ಕಳು, ಮೊಕ್ಕಮ್ಮಳು ಪ್ರತಿ ಗಣೇಶ ಹಬ್ಬದಂದು ಮೂರ್ತಿಗಳನ್ನ ತಯಾರು ಮಾಡ್ತಾರೆ. ಇನ್ನು ಕೊರೊನಾ ಆತಂಕ ನಡುವೆಯೇ ಗಣೇಶ ಚತುರ್ಥಿಗೆ ಗಣಪನ ವಿಗ್ರಹಗಳ ಬೇಡಿಕೆ ಕೇಳಿ ಬರುತ್ತಿದ್ದು, ಕಲಾವಿದರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ

ಗಣಪತಿ ವಿಗ್ರಹ ತಯಾರಿಕೆಗೆ ಆವೆ ಮಣ್ಣು ಬಳಕೆ ಮಾಡಲಾಗುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಆವೆ ಮಣ್ಣನ್ನು ಜಿಎಸ್‍ಟಿ ವ್ಯಾಪ್ತಿಗೆ ತರಲಾಗಿದೆ. ಹೆಚ್ಚಿನ ಜಿಎಸ್‍ಟಿ ವಿಧಿಸಲಾಗುತ್ತಿದ್ದು, ಮಣ್ಣು ಖರೀದಿಗೆ ದರ ಹೆಚ್ಚಾಗಿದೆ.ಇದರಿಂದಾಗಿ ಕೆಲವು ಕಡೆಗಳಲ್ಲಿ ಗಣಪತಿ ವಿಗ್ರಹಕ್ಕೂ ದರ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಕುಂದಾಪುರದಲ್ಲಿ ಉತ್ತಮ ಗುಣಮಟ್ಟದ ಆವೆ ಮಣ್ಣು ಸಿಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ಅಲ್ಲಿಂದ ಮಣ್ಣು ತರುತ್ತಾರೆ. ಮಂಗಳೂರಲ್ಲಿ ತಯಾರಾಗುವ ಗಣಪತಿ ವಿಗ್ರಹಕ್ಕೆ ದೇಶ – ವಿದೇಶಗಳಲ್ಲಿ ಬೇಡಿಕೆ ಇರುತ್ತೆ.ಇಲ್ಲಿ ತಯಾರು ಮಾಡಿದ ವಿಗ್ರಹ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜೊತೆಗೆ ವಿದೇಶಗಳಿಗೂ ರವಾನಿಸಲಾಗುತ್ತಿದೆ. ಈ ಬಾರಿ ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ ಇದೆ.

ಸೆಪ್ಟಂಬರ ತಿಂಗಳಲ್ಲಿ ನಡೆಯುವ ಗಣಪತಿ ಹಬ್ಬಕ್ಕೆ ವಿಗ್ರಹ ತಯಾರಿ ಈಗಾಗಲೇ ಆರಂಭಗೊಂಡಿದೆ. ಈ ನಡುವೆ ಮಣ್ಣಗುಡ್ಡೆಯ ರಾವ್ ಕುಟುಂಬಸ್ಥರು ಕಳೆದ 92 ವರ್ಷದಿಂದ, ಮೂರ್ತಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ವಿದೇಶದಿಂದ ಬಂದು ಗಣಪತಿ ಮೂರ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾರೆ.ಒಟ್ಟಿನಲ್ಲಿ ಕೊರೊನಾ ಆತಂಕ ನಡುವೆಯೇ ಗಣೇಶ ಚತುರ್ಥಿಗೆ ಗಣಪನ ವಿಗ್ರಹಗಳ ಬೇಡಿಕೆ ಕೇಳಿ ಬರುತ್ತಿದ್ದು, ಕಲಾವಿದರು ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.