ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ: 58 ಸಾಧಕರಿಗೆ ಪ್ರಶಸ್ತಿ ಪ್ರಕಟ

ಮಂಗಳೂರು,:- ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಅ.30ರ ಶನಿವಾರ ಜಿಲ್ಲಾಡಳಿತದಿಂದ ಪ್ರಕಟಿಸಲಾಗಿದೆ. ಒಟ್ಟು 58 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಧಕರ ಪಟ್ಟಿ ಇಂತಿದೆ:

ಸಮಾಜ ಸೇವೆಯಲ್ಲಿ-ಮಂಗಳೂರಿನ ಎಸ್.ಎಸ್. ನಾಯಕ್, ಕ್ರೀಡೆಯಲ್ಲಿ-ಬಂಟ್ವಾಳ ತಾಲೂಕಿನ ಬದಿಗುಡ್ಡ ಮನೆಮಾಣಿ ಉದಯ ಚೌಟ, ಕಂಬಳದಲ್ಲಿ-ಹಳದಂಗಡಿ ರವಿಕುಮಾರ್, ಸಮಾಜ ಸೇವೆಯಲ್ಲಿ-ಕಾಟಿಪಳ್ಳದ ಕೂಸಪ್ಪ ಶೆಟ್ಟಿಗಾರ್, ಸಮಾಜ ಸೇವೆಯಲ್ಲಿ-ಬೆಳ್ತಂಗಡಿಯ ವಿವೇಕ್ ವಿನ್ಸೆಂಟ್ ಪಾಯಿಸ್, ಸಮಾಜ ಸೇವೆಯಲ್ಲಿ- ಮಂಗಳೂರಿನ ಕೆ. ರಾಮ ಮೊಗರೋಡಿ, ಸಮಾಜ ಸೇವೆಯಲ್ಲಿ ಮಂಗಳೂರಿನ ಡಾ. ಅಶೋಕ್ ಶೆಟಿ ್ಟ.ಬಿ.ಎನ್, ಸಮಾಜ ಸೇವೆಯಲ್ಲಿ- ಮಂಗಳೂರಿನ ಬೋಳಾರ್ ತಾರಾನಾಥ್ ಶೆಟ್ಟಿ, ಕ್ರೀಡೆಯಲ್ಲಿ ಮಂಗಳೂರಿನ ದಿನೇಶ್ ಕುಂದರ್, ಕ್ರೀಡೆಯಲ್ಲಿ ಮಂಗಳೂರಿನ ಸತೀಶ್ ಬೋಳಾರ್, ಕ್ರೀಡೆಯಲ್ಲಿ ಅನೀಲ್ ಮೆಂಡೋನ್ಸಾ, ಕ್ರೀಡೆಯಲ್ಲಿ ಬಂಟ್ವಾಳ ತಾಲೂಕಿನ ಕು. ಜಯಲಕ್ಷ್ಮೀ.ಜಿ, ಕ್ರೀಡೆಯಲ್ಲಿ ಮಂಗಳೂರಿನ ಕುಲಶೇಖರದ ಕು. ವೆನಿಜಿಯಾ ಆ್ಯನ್ನಿ ಕಾರ್ಲೊ, ಕ್ರೀಡೆಯಲ್ಲಿ ಮಂಗಳೂರಿನ ಕುಲಶೇಖರದ ವಿನ್ಸೆಂಟ್ ಪ್ರಕಾಶ್ ಕಾರ್ಲೊ, ಸ್ಯಾಕ್ಸೋಪೋನ್ ವಾದಕದಲ್ಲಿ ಬಂಟ್ವಾಳ ತಾಲೂಕಿನ ಪಡಿಬಾಗಿಲು ಮನೆ ಅಳಕೆಯ ಪಿ.ಕೆ. ದಾಮೋದರ, ನಾಗಸ್ವರ ವಾದಕದಲ್ಲಿ ಮಂಗಳೂರಿನ ಶಿಬರೂರು-ದೇಲಂತಬೆಟ್ಟುವಿನ ಶಿವರಾಮ ಶೇರಿಗಾರ, ಸಾಂಸ್ಕøತಿಕ ವಿಭಾಗದಲ್ಲಿ ಮಂಗಳೂರಿನ ಜಗಜ್ಜನನಿ ಕುಕ್ಕೆ ರೊಟ್ಟು ಮನೆ ಹೊಸಬೆಟ್ಟುವಿನ ಶಂಕರ್.ಜೆ.ಶೆಟ್ಟಿ, ತಾಸೆ ವಾದಕ ವಿಭಾಗದಲ್ಲಿ ಮೂಡಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಅಣ್ಣಿ ಸುವರ್ಣ, ನಾದಸ್ವರ ವಾದಕ ವಿಭಾಗದಲ್ಲಿ ಮೂಡಬಿದಿರೆ ತಾಲೂಕಿನ ಬಡಗಮಿಜಾರುವಿನ ಎ.ಕೆ. ಉಮಾನಾಥ್ ದೇವಾಡಿಗ, ತಾಳಮದ್ದಳೆ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಪದ್ಮನಾಭ್ ಶೆಟ್ಟಿಗಾರ್, ನಾಗಸ್ವರ ವಾದಕ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಾಗೇಶ್ ಶೇರಿಗಾರ, ನಾಟಕ ವಿಭಾಗದಲ್ಲಿ ಕಡಬ ತಾಲೂಕಿನ ರವಿ ರಾಮಕುಂಜ, ಯಕ್ಷಗಾನ ವಿಭಾಗದಲ್ಲಿ ಸುಳ್ಯ ತಾಲೂಕಿನ ಜಯಾನಂದ ಸಂಪಾಜೆ, ಸಂಗೀತ ವಿಭಾಗದಲ್ಲಿ ಪುತ್ತೂರು ತಾಲೂಕಿನ ಪುತ್ತೂರು ಪಾಂಡುರಂಗ ನಾಯಕ್, ಸಾಂಸ್ಕøತಿಕ ವಿಭಾಗದಲ್ಲಿ ಪುತ್ತೂರು ತಾಲೂಕಿನ ಕರ್ಕುಂಜದ ಲಿಂಗಪ್ಪ ಗೌಡ ಕಡೆಂಗ, ಸಾಹಿತ್ಯ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಪ.ರಾಮಕೃಷ್ಣ ಶಾಸ್ತ್ರಿ, ಸಾಂಸ್ಕøತಿಕ ವಿಭಾಗದಲ್ಲಿ  ಉಳ್ಳಾಲದ ಡಾ.ಅರುಣ್ ಉಳ್ಳಾಲ್, ಜಾನಪದ ವಿಭಾಗದಲ್ಲಿ ಕೊಂಚಾಡಿಯ ಉಮೇಶ್ ಪಂಬದ, ಜಾನಪದ ವಿಭಾಗದಲ್ಲಿ ಹಳೆಯಂಗಡಿಯ ಶ್ರೀ ಕೃಷ್ಣ ಪೂಜಾರಿ, ಜಾನಪದ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕೊಂಚಾಡಿಯ ಭಾಸ್ಕರ್ ಬಂಗೇರ, ವೈದ್ಯಕೀಯ ವಿಭಾಗದಲ್ಲಿ ಮಂಗಳಾದೇವಿಯ ಡಾ. ಗೋಪಾಲ್ ಕೃಷ್ಣ ಭಟ್.ಬಿ.ಸಂಕಬಿತ್ತಿಲು, ವೈದ್ಯಕೀಯ ವಿಭಾಗದಲ್ಲಿ ಬಿಜೈನ ಡಾ.ಶಶಿಕಾಂತ್ ತಿವಾರಿ, ನಾಟಿ ವೈದ್ಯ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರುವಿನ ಶೀನಾ ಪೂಜಾರಿ, ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕೋಡಿಕಲ್‍ನ ಶಿವಪ್ರಸಾದ್.ಬಿ, ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾಧರ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗದಲ್ಲಿ ಗುವಾಯನ ಕೆರೆಯ ಕುವೆಟ್ಟು ಗ್ರಾಮದ ಬಿ.ಶ್ರೀನಿವಾಸ್ ಕುಲಾಲ್, ಗಡಿನಾಡು (ಯಕ್ಷಗಾನ) ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ರಾಘವ್ ಬಳ್ಳಾಲ್ ಕಾರಡ್ಕ, ಹೊರನಾಡು ವಿಭಾಗದಲ್ಲಿ (ಬಹರೈನ್‍ನಲ್ಲಿ ವಾಸ) ಕಮಲಾಕ್ಷ ಅಮೀನ್, ಚಿತ್ರಕಲೆ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕಾಟಿಪಳ್ಳದ ದೇವಿ ಕಿರಣ್ ಗಣೇಶ್‍ಪುರ, ಕೃಷಿ ವಿಭಾಗದಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿಯ ಕಡಮಜಲು ಶ್ರೀ ಸುಭಾಸ್ ರೈ.ಬಿ.ಎ,

ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಬೊಕ್ಕಪಟ್ಣದ ವೀರನಾಯಕ್ ಜನಸೇವಾ ಟ್ರಸ್ಟ್‍ಗೆ, ಸಮಾಜ ಸೇವೆಯಲ್ಲಿ ಮುಲ್ಕಿಯ ಬಿಲ್ಲವ ಸಮಾಜ ಸೇವ ಸಂಘ, ಸಮಾಜ ಸೇವೆಯಲ್ಲಿ ಉರ್ವದ ಚಿಲಿಂಬಿಯ ಬಾಲಕರ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಟ್ರಸ್ಟ್, ಸಮಾಜ ಸೇವೆಯಲ್ಲಿ ಬಂಟ್ವಾಳ ತಾಲೂಕಿನ ಕಡೆಶಿವಾಲಯದ ಯುವಶಕ್ತಿ ಕಡೆ ಶಿವಾಲಯ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಜಪ್ಪು ಕಡೆಕಾರು ಮಲ್ಲಿಕಾರ್ಜುನ ಸೇವಾ ಸಂಘ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕುಳಾಯಿಯ ಸ್ಪಂದನಾ ಫ್ರೆಂಡ್ಸ್ ಸರ್ಕಲ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಪಣಂಬೂರಿನ ಬೈಕಂಪಾಡಿ ವಿದ್ಯಾರ್ಥಿ ಸಂಘ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಉಜಿರೆಯ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕಿನ್ಯದ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ತೊಕ್ಕೊಟ್ಟುವಿನ ಹೆಲ್ತ್ ಇಂಡಿಯಾ ಫೌಂಡೇಷನ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಮರೋಳಿಯ ವೈಟ್ ಡೌಸ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕೋಟೆಕಾರ್‍ನ ಕೇಸರಿ ಮಿತ್ರ ವೃಂದ, ಭರತನಾಟ್ಯದಲ್ಲಿ ಮಂಗಳೂರು ತಾಲೂಕಿನ ಬಳ್ಳಾಲ್ ಬಾಗ್‍ನ ಸನಾತನ ನಾಟ್ಯಾಲಯ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಉಳ್ಳಾಲದ ಶ್ರೀ ಸಾಯಿ ಪರಿವಾರ್ ಟ್ರಸ್ಟ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ ಕ್ಲಬ್-ತೋಕೂರು, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಪಡುಪೆರಾರ್‍ನ ಶ್ರೀ ನಾಗಬ್ರಹ್ಮ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕಂಕನಾಡಿಯ ಕಂಕನಾಡಿ ಯುವಕ ವೃಂದ ಹಾಗೂ ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಸೋಮೇಶ್ವರದ ಅಶೋಕ್ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.