ಟೀಮ್ ಬಿ- ಹ್ಯೂಮನ್ ಮಂಗಳೂರು : ಉಚಿತ ಕೋವಿಡ್ ಲಸಿಕಾ ಶಿಬಿರ

ಟೀಮ್ ಬಿ-ಹ್ಯೂಮನ್(ರಿ) ಮಂಗಳೂರು ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ ಹಾಗೂ ಟೀಂ ಮೇಕ್-ಎ-ಚೇಂಜ್ ಇದರ ಸಹಭಾಗಿತ್ವದಲ್ಲಿ ಉಚಿತ ಕೋರೋನ ಲಸಿಕಾ ಶಿಬಿರವು ಬಲ್ಮಠದ ಬಿಷಪ್ ಜತ್ತನ ಸಭಾಂಗಣದಲ್ಲಿ ಯಶಸ್ವಿಯಾಗಿ ನೆರವೇರಿತು.
ಇದು ಟೀಂ ಬಿ-ಹ್ಯೂಮನ್ ತಂಡವು ಆಯೋಜಿಸಿದ ಆರನೇ ಲಸಿಕಾ ಶಿಬಿರವಾಗಿತ್ತು.

ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಿದಂತಹ ಈ ಲಸಿಕಾ ಶಿಬಿರದಲ್ಲಿ ಸುಮಾರು 272 ಜನಸಾಮಾನ್ಯರು,ಹೋಟೆಲ್ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ವಿಶೇಷ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರಥಮ ಮತ್ತು ಕೆಲವರು ತಮ್ಮ ದ್ವಿತೀಯ ಡೋಸ್ ಲಸಿಕೆಯನ್ನು ಪಡೆದರು.ಈ ಸಂದರ್ಭದಲ್ಲಿ ಸುಮಾರು 8 ಅಂಗವಿಕಲ ಹಿರಿಯ ನಾಗರಿಕರಿಕರ ಮನವಿ ಮೇರೆಗೆ ಅವರ ಮನೆಗಳಿಗೆ ಶಿಬಿರದ ಸ್ವಯಂಸೇವಕರು ತೆರಳಿ ಲಸಿಕೆಯನ್ನು ನೀಡಿದ್ದು ವಿಶೇಷವಾಗಿತ್ತು.

ಟೀಂ ಬಿ-ಹ್ಯೂಮನ್ ನ ಹಿಂದಿನ ಲಸಿಕಾ ಶಿಬಿರಗಳಂತೆ ಈ ಶಿಬಿರವನ್ನೂ ಆಯೋಜಿಸಲು ಸಹಕರಿಸಿದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಹಾಗೂ ಸ್ಥಳೀಯ ಕಾಪೆರ್Çರೇಟರ್ಗಳಾದ ಶ್ರೀ ಸಂದೀಪ್ ಗರೋಡಿ, ಶ್ರೀ ನವೀನ್ ಡಿಸೋಜ ಹಾಗೆಯೇ ಬಿಷಪ್ ಜತ್ತನ ಸಭಾಂಗಣದ ಕಾರ್ಯನಿರ್ವಾಹಕರಾದ ಡಾ.ವಾಟ್ಸನ್ ರವರಿಗೆ ಟೀಂ ಬಿ-ಹ್ಯೂಮನ್ ಇದರ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ತಮ್ಮ ಹೃದಯಾಂತರಾಳದ ಧನ್ಯವಾದಗಳನ್ನು ಸಮರ್ಪಿಸಿದರು.

ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವಲ್ಲಿ ಟೀಂ ಬಿ-ಹ್ಯೂಮನ್ ತಂಡದ ಸ್ವಯಂಸೇವಕರು, ಟೀಂ ಮೇಕ್-ಎ-ಚೇಂಜ್ ನ ಸದಸ್ಯರು ಮತ್ತು ರೆಡ್ ಕ್ರಾಸ್ ನ ಪ್ರವೀಣ್ ಮತ್ತವರ ತಂಡವು ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದರು.

 

Related Posts

Leave a Reply

Your email address will not be published.