ಟೀಮ್ ಬಿ-ಹ್ಯೂಮನ್, ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ : ಸ್ವಾತಂತ್ರ್ಯೋತ್ಸವ- ರಕ್ತದಾನದ ಶಿಬಿರ
ಟೀಮ್ ಬಿ-ಹ್ಯೂಮನ್, ಮಂಗಳೂರು ಹಾಗೂ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ (ರಿ) 75 ನೇ ಸ್ವಾತಂತ್ರ್ಯೋತ್ಸವವನ್ನು ರಕ್ತದಾನದ ಮೂಲಕ ವಿಶಿಷ್ಟವಾಗಿ ಆಚರಣೆ
ಟೀಮ್ ಬಿ-ಹ್ಯೂಮನ್, ಮಂಗಳೂರು ಹಾಗೂ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ (ರಿ) ಸೋಮೇಶ್ವರ ಉಚ್ಚಿಲ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರದ ಮೂಲಕ ಭಾರತದ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಈ ಮಹತ್ವಪೂರ್ಣ ಗಳಿಗೆಯನ್ನು ಬಹಳ ಅರ್ಥವತ್ತಾಗಿ ಆಚರಿಸಲಾಯಿತು. ಈ ಕಾರ್ಯಕ್ರಮವು ಸೋಮೇಶ್ವರ ಉಚ್ಚಿಲದ ಕಿಯಾಂಝ ಗಾರ್ಡನ್ ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಎರಡೂ ಸಂಸ್ಥೆಗಳ ಸದಸ್ಯರು ಅತ್ಯುತ್ಸಾಹದಿಂದ ಪಾಲ್ಗೊಂಡು ಸುಮಾರು 104 ಯುನಿಟ್ ಗಳಷ್ಟು ರಕ್ತವನ್ನು ಈ ಕಾರ್ಯಕ್ರಮದ ಮೂಲಕ ಸಂಗ್ರಹಿಸಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮುಖಾಂತರ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ರಕ್ತನಿಧಿಗೆ ನೀಡಲಾಯಿತು.
ಸ್ಥಳೀಯ 407 ಜುಮಾ ಮಸೀದಿ ಖತೀಬರಾದ ಇಬ್ರಾಹಿಂ ಫೈಝಿಯವರು ದುಆದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷರೂ ಹೈಕೋರ್ಟ್ ನ್ಯಾಯವಾದಿಯಾಗಿರುವ ಮುಝಫ್ಫರ್ ಅಹ್ಮದ್ ರವರು ಸ್ವತಃ ರಕ್ತದಾನ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮಹಮ್ಮದ್ ಅಲಿ ಜಿ.ಐ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಆರಕ್ಷಕ ಠಾಣೆಯ ನಿರೀಕ್ಷಕ ಸಂದೀಪ್ ಜಿ.ಎಸ್, ಟೀಮ್ ಬಿ-ಹ್ಯುಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್, ಉಳ್ಳಾಲ ದರ್ಗಾ ಅಧ್ಯಕ್ಷರಾದ ರಶೀದ್ ಹಾಜಿ, ಸ್ಥಳೀಯ 407 ಜುಮಾ ಮಸೀದಿ ಅಧ್ಯಕ್ಷರಾದ ಯು. ಬಿ. ಮಹಮ್ಮದ್ ಹಾಜಿ, ಬಿಜೆಪಿ ಮಂಗಳೂರು ವಿಧಾನಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಉಚ್ಚಿಲ್,SDPI ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ರಿಯಾಝ್ ಫರಂಗಿಪೇಟೆ, ಹೈಕೋರ್ಟ್ ನ್ಯಾಯವಾದಿ ಮುಝಫ್ಫರ್ ಅಹ್ಮದ್, ರಹ್ಮಾನಿಯ ಮಸೀದಿ ಅಧ್ಯಕ್ಷರಾದ ಅಬ್ದುಲ್ ಸಲಾಂ ಉಚ್ಚಿಲ್, ಸದರ್ ಮುಅಲ್ಲಿಂ ಅಬ್ದುಲ್ ಅಝೀಝ್ ಮನ್ನಾನಿ, ಕೆಎಂಟಿ ಟ್ರೇಡಿಂಗ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಬ್ದುಲ್ ರಝಾಕ್, ಟೀಂ ಬಿ-ಹ್ಯೂಮನ್ ಜುಬೈಲ್ ಘಟಕಾಧ್ಯಕ್ಷರಾದ ಹಫೀಝ್ ಸಾಸ್ಕೋ, NSUI ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಹ್ನಾಫ್ ಅಹ್ಮದ್, ರಹ್ಮಾನಿಯ ಮಸೀದಿ ಇಮಾಂ ಅಕ್ಬರ್ ಅಲಿ ಸಅದಿ ಹಾಗೂ ರೆಡ್ಕ್ರಾಸ್ ಸೊಸೈಟಿಕಾರ್ಯಪ್ರವೃತ್ತಕ ಪ್ರವೀಣ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಳ್ಳಾಲ ಆರಕ್ಷಕ ಠಾಣಾ ಇನ್ಸ್ಪೆಕ್ಟರ್ ಸಂದೀಪ್ ಜಿ.ಎಸ್ ರವರುಸಭೆಯನ್ನುದ್ದೇಶಿಸಿ ಮಾತನಾಡುತ್ತಾ ರಕ್ತದಾನದ ಮಹತ್ವವನ್ನು ವಿವರಿಸಿದರು ಅದೇರೀತಿ ಟೀಮ್ ಬಿ-ಹ್ಯೂಮನ್ ಹಾಗೂ ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಇದರ ಸಮಾಜ ಸೇವಾ ಕಾರ್ಯಗಳ ಬಗ್ಗೆ ಅತೀವ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಈ ರೀತಿ ಮಾದರಿ ಕಾರ್ಯಕ್ರಮದ ಮೂಲಕ ಆಚರಿಸಿದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. SDPI ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಿಯಾಝ್ ಫರಂಗಿಪೇಟೆ, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ , ನ್ಯಾಯವಾದಿ ಮುಝಫ್ಫರ್ ಅಹ್ಮದ್ ಹಾಗೂ NSUI ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಹ್ನಾಫ್ ಅಹ್ಮದ್ ರವರು ರಕ್ತದಾನದ ಮಹತ್ವದ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ರಕ್ತದಾನ ಶಿಬಿರದಲ್ಲಿ ಜಾತಿ ಮತ ಭೇದವೆನ್ನದೆ ಎಲ್ಲ ವರ್ಗದ ಜನರು ಅತ್ಯುತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಜೊತೆಗೆ ಸ್ಥಳೀಯ 407 ಜುಮಾ ಮಸೀದಿಯಲ್ಲಿ ಕಲಿಯುತ್ತಿರುವ ಸುಮಾರು 10ಕ್ಕಿಂತಲೂ ಹೆಚ್ಚು ಮುತಅಲ್ಲಿಂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಕೊನೆಯಲ್ಲಿ ಸಮಾರೋಪ ಸಮಾರಂಭದೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಂಡಿತು. ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಇದರ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ನಾಸಿರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಮುಬಾರಕ್ ವೆಲ್ಫೇರ್ ಅಸೋಸಿಯೇಷನ್ ಮಾಜಿ ಸಂಚಾಲಕರಾದ ಅಬ್ದುಲ್ ಸಲಾಂ ಜಿ. ಐ ಯವರು ಧನ್ಯವಾದ ಸಮರ್ಪಿಸಿದರು.