ಟೋಕಿಯೋ ಒಲಿಂಪಿಕ್ಸ್: ಭಾರತದ ಪುರುಷರ ಹಾಕಿ ತಂಡದ ಐತಿಹಾಸಿಕ ಸಾಧನೆ

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತ ಪುರುಷರ ಹಾಕಿ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಮನ್‍ಪ್ರೀತ್ 4-5 ಗೋಲುಗಳ ಅಂತರದಲ್ಲಿ ಗೆದ್ದು ಬೀಗಿದ್ದು, ಭಾರತಕ್ಕೆ ನಾಲ್ಕನೇ ಪದಕ ಸಿಕ್ಕಿದೆ. ಈ ಮೂಲಕ ಬರೋಬ್ಬರಿ 41 ವರ್ಷಗಳ ಬಳಿಕ ಒಲಿಂಪಿಕ್ ಹಾಕಿಯಲ್ಲಿ ಭಾರತ ಚೊಚ್ಚಲ ಪದಕಕ್ಕೆ ಕೊರಳೊಡ್ಡಿದೆ.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಕದನದಲ್ಲಿ ಪಂದ್ಯ ಆರಂಭವಾದ ಕೆಲವೇ ನಿಮಿಷದಲ್ಲಿ ಜರ್ಮನಿ ಖಾತೆ ತೆರೆಯಿತು. ಮುಂದಿನ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸುವ ಅವಕಾಶ ಇತ್ತಾದರು ಸ್ವಲ್ಪದರಲ್ಲೇ ಕೈಚೆಲ್ಲಿತು. ಈ ಮೂಲಕ ಮೊದಲ ಕ್ವಾರ್ಟರ್?ನಲ್ಲಿ ಜರ್ಮನಿ 1-0 ಮುನ್ನಡೆ ಸಾಧಿಸಿತು.

ಸಿಮ್ರಂಜಿತ್ ಸಿಂಗ್ ಚೆಂಡನ್ನು ನೆಟ್ ನೊಳಗೆ ಅಟ್ಟಿ ಮೊದಲ ಗೋಲು ದಾಖಲಿಸಿದರು. ಇದಾದ ಸ್ವಲ್ಪದರಲ್ಲೇ ಜರ್ಮನಿ ಒಂದರ ಹಿಂದೆ ಒಂದರಂತೆ ಸತತ ಎರಡು ಗೋಲು ಬಾರಿಸಿತು. ಈ ಸಂದರ್ಭ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹಾರ್ದಿಕ್ ಸಿಂಗ್ ಅದ್ಭುತವಾಗಿ ಉಪಯೋಗಿಸಿಕೊಂಡು 2ನೇ ಗೋಲು ದಾಖಲಿಸಿದರು. ಇದರ ಬೆನ್ನಲ್ಲೆ ಮತ್ತೊಂದು ಪೆನಾಲ್ಟಿ ಕಾರ್ನರ್ನಲ್ಲಿ ಗೋಲು ಸಿಡಿಸುವ ಮೂಲಕ ಭಾರತ 3-3ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಜರ್ಮನಿಯ ಆಕ್ರಮಣಕಾರಿ ಆಟಕ್ಕೆ ತಕ್ಕ ಉತ್ತರ ನೀಡಿದ ಮನ್‍ಪ್ರೀತ್ ಪಡೆ 5-4 ಗೋಲುಗಳ ಅಂತರದಿಂದ ಗೆದ್ದು 4 ದಶಕಗಳ ಬಳಿಕ ಕಂಚಿನ ಪದಕ ತನ್ನದಾಗಿಸಿದೆ.

ಟೋಕಿಯೋ ಒಲಿಂಪಿಕ್ಸ್ ನ ಸೆಮಿ ಫೈನಲ್ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಿಂದ ಭಾರತ ಸೋತಿತ್ತು.

 

Related Posts

Leave a Reply

Your email address will not be published.