ಟೋಲ್‌ಗೇಟ್ ಪಕ್ಕದಲ್ಲೆ ಬಸ್ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಮಂಜೇಶ್ವರ: ಕೇರಳ ಗಡಿ ಭಾಗದಿಂದ ಪ್ರಯಾಣಿಕರನ್ನು ಹೇರಿಕೊಂಡು ಆಗಮಿಸುತ್ತಿರುವ ಬಸ್ಸುಗಳು ಕೇರಳ ಕರ್ನಾಟಕದ ಗಡಿಯಲ್ಲಿರುವ ಕರ್ನಾಟಕದಲ್ಲಿ ಪ್ರಯಾಣಿಕರನ್ನು ಇಳಿಸಿ ಟೋಲ್ ಗೇಟ್ ಪಕ್ಕದಲ್ಲೇ ನಿಲುಗಡೆಯನ್ನು ನೀಡುವುದನ್ನು ಪ್ರತಿಭಟಿಸಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸ್ಥಳೀಯ ವ್ಯಾಪಾರಿಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ಖಾಸಗಿ ಬಸ್ಸುಗಳು ಕೊರೊನ ಲಾಕ್ ಡೌನ್ ಗಿಂತ ಮೊದಲು ಯಾವರೀತಿಯಲ್ಲಿ ಯಾವ ಸ್ಥಳಗಳಲ್ಲಿ ನಿಲುಗಡೆಯಾಗುತಿತ್ತೋ ಅದನ್ನೇ ಮುಂದುವರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.

ಕೇರಳದ ತಲಪಾಡಿಯಲ್ಲಿ ಬಸ್ ನಿಲುಗಡೆಯಾಗಬೇಕು ಅದೇ ರೀತಿ ಕರ್ನಾಟಕದ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣಿಕರನ್ನು ಕೇರಳದ ಖಾಸಗಿ ಬಸ್ಸುಗಳು ನಿಲುಗಡೆಯಾಗುವ ತಲಪಾಡಿಯಲ್ಲಿ ಇಳಿಸಿ ಕರ್ನಾಟಕದ ತಲಪಾಡಿಯಲ್ಲಿ ನಿಲುಗಡೆಯಾಗಬೇಕು ಈ ರೀತಿಯ ಬೇಡಿಕೆಯನ್ನು ಮುಂದಿಟ್ಟು ಸೂಚನಾ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಬಗ್ಗೆ ಈ ಮೊದಲೇ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲಾಧಿಕಾರಿಯವರ ಮಧ್ಯೆ ಒಂದು ಒಡಂಬಡಿಕೆ ಕೂಡಾ ಇರುವುದಾಗಿ ಹೇಳಲಾಗಿದೆ ಅದನ್ನೇ ಮುಂದುವರಿಸುವಂತೆ ಆಗ್ರಹಿಸಲಾಗಿದೆ.ಜೊತೆಯಾಗಿ ಕೇರಳ ಪೊಲೀಸರು ಕೂಡಾ ಬಸ್ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಿ ಸಹಕರಿಸುವಂತೆ ವಿನಂತಿಸಿಕೊಂಡರು. ಇನ್ನು ಮುಂದಕ್ಕೂ ಖಾಸಗಿ ಬಸ್ಸು ಚಾಲಕರು ನೇತಾರರ ಹಾಗೂ ಸ್ಥಳೀಯರ ವಿನಂತಿಯನ್ನು ಉಲ್ಲಂಘಿಸಿದರೆ ಮುಂದಿನ ದಿನಗಳಲ್ಲಿ ಬಸ್ಸುಗಳನ್ನು ತಡೆದು ಹೋರಾಟ ನಡೆಸಲಿರುವುದಾಗಿ ಎಚ್ಚರಿಕೆ ನೀಡಲಾಗಿದೆ.

ನೇತಾರರಾದ ಮುಸ್ತಫಾ ಉದ್ಯಾವರ, ದಯಾಕರ ಮಾಡ, ರಾಜೇಶ್ ಮಜಲ್, ಮುಸ್ತಫಾ ಕಡಂಬಾರ್, ಅಶ್ರಫ್ ಕುಂಜತ್ತೂರು, ರಝಾಕ್, ಕಮಲಾಕ್ಷ ಕನಿಲ, ವ್ಯಾಪಾರಿ ಕುಂಞಾಲಿ ಮೊದಲಾದವರು ಪ್ರತಿಭಟನೆಗೆ ಮುಂದಾಳತ್ವ ನೀಡಿದರು.

 

Related Posts

Leave a Reply

Your email address will not be published.